ದೇವರ ಆರತಿ ವೇಳೆ ನವಿಲು ಪ್ರತ್ಯಕ್ಷ

ಚೆನ್ನೈ.ಮೇ.೩೧- ಗರ್ಭಗುಡಿ ಪೂಜೆ ಸಲ್ಲಿಸುವ ವೇಳೆ ನವಿಲ್ಲೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಘಟನೆ ತಮಿಳುನಾಡಿನ
ತಿರುಪ್ಪೂರು ಜಿಲ್ಲೆಯ ಅರುಲ್ಮಿಗು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದಿದೆ. ಈ ದೃಶ್ಯ ದೇವರ ಮಹಿಮೆಗೆ ಸಾಕ್ಷಿಯಾಗಿದ್ದು ಭಕ್ತರು ಅಚ್ಚರಿಗೊಳಗಾಗಿದ್ದಾರೆ.
ನವಿಲು ಸುಬ್ರಹ್ಮಣ್ಯ ಸ್ಚಾಮಿಯ ವಾಹನ, ನವಿಲಿನ ಕಣ್ಣು ಜ್ಞಾನ, ತಿಳುವಳಿಕೆ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ.
ಅರುಲ್ಮಿಗು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ದೇವರಿಗೆ ಆರತಿ ಸಲ್ಲಿಸುವ ವೇಳೆ ನವಿಲು ಗರ್ಭ ಗುಡಿಯ
ಮುಂದೆ ಬಂದಿದೆ. ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಬಳಿಕ ಪೂಜಾರಿ ನವಿಲಿಗೂ ಆರತಿ ಮಾಡಿದ್ದಾರೆ.
ಪೂಜೆ ವೇಳೆ ಅಷ್ಟೊಂದು ಭಕ್ತರಿದ್ದರೂ ನವಿಲು ಕದಲದೇ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆ ಸಂದರ್ಭದಲ್ಲಿ ಭಕ್ತರು
ನವಿಲಿನ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.