ದೇವರು-ಭಕ್ತರ ನಡುವೆ ನೇರ ಮಾರ್ಗ ತಿಳಿಸಿದವರು ಶರಣರು


ಸಂಜೆವಾಣಿ ವಾರ್ತೆ
ಸಂಡೂರು: ಮಾ:27:  12ನೇ ಶತಮಾನದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ರಾಂತಿಯನ್ನು ಮಾಡುವ ಮೂಲಕ ವರ್ಣ ವ್ಯವಸ್ಥೆಯ ವಿರುದ್ದ ಸಿಡಿದು ಮದ್ಯವರ್ತಿ ಪೂಜಾರಿಯನ್ನು ತಪ್ಪಿಸಿ ನೇರವಾಗಿ ದೇವರನ್ನು ಪಡೆಯುವ ಮಾರ್ಗ ತಿಳಿಸಿದವರು 12ನೇ ಶತಮಾನದ ಶರಣರು ಎಂದು ಶಿಕ್ಷಕ ಬಿ.ಎಂ. ಶಶಿಧರ ತಿಳಿಸಿದರು.
ಅವರು ಪಟ್ಟಣದಲ್ಲಿ ಅಖಿಲಭಾರತ ಶರಣ ಸಾಹಿತ್ಯಪರಿಷತ್ತು ತಾಲೂಕು ಘಟಕದ ವತಿಯಿಂದ ಮಹಾಮನೆ ಕಾರ್ಯಕ್ರಮವನ್ನು ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ವಿವೇಕಾನಂದ ಪ್ರೌಢಶಾಲೆಯಲ್ಲಿ ಶ್ರೀಮತಿ ಸರೋಜಮ್ಮ ತಾಮ್ರಪರ್ಣಿ ಮತ್ತು ವೆಂಕೋಬಾಚಾರ್ಯ ತಾಮ್ರಪರ್ಣಿ ಯವರ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ ಶಿವನನ್ನು ಅರಾಧಿಸುವ ಶರಣರುನಿತ್ಯ ಕಾಯಕ-ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಿದರು, ಅಸಮಾನತೆಯಿಂದ ಕೂಡಿದ ಸಮಾಜವನ್ನು ಸಮಾನತೆಯ ತಳಹದಿಯಲ್ಲಿ ಕಟ್ಟಿದರು ಲಿಂಗ ಸಮಾನತೆಯನ್ನು ಸಾರಿದರು ಶರಣ ಸತಿ-ಲಿಂಗಪತಿ ಎನ್ನುವ ತತ್ವ ಸಮಾನತೆಯನ್ನು ಎತ್ತಿ ತೋರುತ್ತದೆ, ಅವರ ತತ್ವಗಳು ವೈಚಾರಿಕತೆಯಿಂದ ಕೂಡಿವೆ, ಅಲ್ಲಮ ಪ್ರಭುಗಳು ಹೇಳುವಂತೆ ಹೆಣ್ಣಿಗಾಗಿ ಸತ್ತವರು, ಹೊನ್ನಿಗಾಗಿ ಸತ್ತವರು ಬಹುಜನರಿದ್ದಾರೆ ಅದಕ್ಕೆ ರಾಮಾಯಣ, ಮಹಾಭಾರತ ಕಥೆಗಳೇ ಸಾಕ್ಷಿ, ಅದರೆ ದೇವರಿಗಾಗಿ, ಶಿವನಿಗಾಗಿ ಸತ್ತವರನ್ನು ನಾ ಕಾಣೆ ಎನ್ನುವ ಅಂಶ ಸಮಾಜದಲ್ಲಿ ಹೆಣ್ಣು, ಹೊನ್ನು ಮಣ್ಣಿಗಾಗಿ ಇಂದು ಸಹ ನಡೆಯು ದುಷ್ಟ ಕೃತ್ಯಗಳೇ ಸಾಕ್ಷಿ ಅದ್ದರಿಂದ ಅವುಗಳ ಅಸೆ ತೊರೆದು ದುಷ್ಟ ಸಂಗಬೇಡವೆಂದು ಅನುಭವ ಮಂಟಪಕಟ್ಟಿ ಸಮಾನತೆ ಸಾರಿದರು, ಅದೇ ರೀತಿ ದಾಸ ಸಾಹಿತ್ಯವೂ ಸಹ ಅದ್ಭುತವಾದುದು ಅದರಲ್ಲಿ ಕರ್ನಾಟಕ ಸಂಗೀತ ಪರಂಪರೆಯನ್ನು ಹುಟ್ಟು ಹಾಕಿ ದಾಸರು ಕೀರ್ತನೆಗಳನ್ನು ರಚಿಸಿ ಪ್ರತಿ ಮನೆಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಅಗಮಿಸಿ ಪತ್ರಕರ್ತರಾದ ಅರಳಿಕುಮಾರಸ್ವಾಮಿ ಮಾತನಾಡಿ ದಾಸರೆಂದರೆ ಪುರಂದರ ದಾಸರಯ್ಯ ಎನ್ನುವ ಮಾತಿದೆ, ಅವರು ರಚಿಸಿದ ಕೀರ್ತನೆಗಳು, ಉಗಾಬೋಘಗಳು, ಅದ್ಬುತವಾದುದು, ಅತಿ ಜಿಪುಣನಾಗಿದ್ದ ಕನಕ ದಾಸ ಶ್ರೇಷ್ಠ ದಾಸನಾಗಿ ಕನ್ನಡ ಸಾಹಿತ್ಯಕ್ಕೆ ಅದ್ಬುತವಾದ ಸಾಹಿತ್ಯವನ್ನು ನೀಡಿದ್ದಾರೆ ಅವರೂ ಸಹ ಶರಣರ ಮಾರ್ಗದಲ್ಲಿ ಸಾಗಿದವರು, ಭಕ್ತಿ ಪರಂಪರೆಯನ್ನು ಮುಂದುವರಿಸಿದ ಕೀರ್ತಿ ದಾಸರಿಗೆ ಸಲ್ಲುತ್ತದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಗುರುಗಳಾದ ಪುರುಷೋತ್ತಮರವರು ಮಾತನಾಡಿ ಇಂದು ನಾವು ಶರಣ ಸಂಸ್ಕೃತಿಯನ್ನು ನಮ್ಮ ಶಾಲೆಯಲ್ಲಿ ಪರಿಷತ್ತು ಹಮ್ಮಿಕೊಳ್ಳುವ ಮೂಲಕ ನಮ್ಮ ಮಕ್ಕಳಿಗೆ ಅದ್ಬುತವಾದಂತಹ ಜ್ಞಾನವನ್ನು ಪಸರಿಸುತ್ತಿದ್ದಾರೆ ಇಂತಹ ಯಾವುದೇ ಕಾರ್ಯಕ್ರಮ ನಡೆದರೂ ಸಹ ನಮ್ಮ ಶಾಲೆ ನಿತ್ಯ ಸಹಕರಿಸುತ್ತದೆ, ಮಕ್ಕಳು ನಮ್ಮ ಸಂಸ್ಕೃತಿಯ ಮೂಲಬೇರು ಧರ್ಮ, ಅದರ ಅಡಿಯಲ್ಲಿ ಶರಣತತ್ವಗಳನ್ನು ಪಾಲಿಸುವ ಮೂಲಕ ಅದನ್ನು ಉಳಿಸಿ ಬೆಳೆಸಬೇಕು ಎಂದರು.
ವಿವೇಕಾನಂದ ವಿದ್ಯಾಕೇಂದ್ರದ ಪ್ರಾ. ಶಾಲೆಯ ಮುಖ್ಯಗುರುಗಳಾದ ಬಿ.ಎಸ್. ತೋಟದ ಆರಾಧ್ಯ ಅವರು ಮಾತನಾಡಿದರು, ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆಯ ಅಧ್ಯಕ್ಷರಾದ ನೀಲಾಂಬಿಕೆಯವರು ಮಗು ವಚನಗಳನ್ನು ಕಲಿಯುವ ಮೂಲಕ ನಮ್ಮ ಶರಣರ ತತ್ವಗಳನ್ನು ಉಳಿಸಬೇಕು ಎಂದರು, ಎ.ಎಂ. ಶಿವಮೂರ್ತಿ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸ ಬಸವರಾಜ ಬಣಕಾರ ಅವರು ಮಾತನಾಡಿದರು. ಸಹ ಶಿಕ್ಷಕರಾದ ನಾಗರಾಜ ಸೂರವ್ವನಹಳ್ಳಿ ನಿರೂಪಿಸುವರು ಪ್ರತಿಮಾ ವಂದಿಸಿದರು, ಭಾನುಶ್ರೀ ಸಂಗಡಿಗರು ಪ್ರಾರ್ಥಿಸಿದರು.

One attachment • Scanned by Gmail