ಮುಂಬೈ,ಏ,೩೦- ದೇವರು ಬಯಸಿದಾಗ ಮದುವೆಯಾಗುತ್ತೇನೆ ಇಲ್ಲದಿದ್ದರೆ “ನನ್ನ ಪ್ರೇಮ ಕಥೆಗಳು ನನ್ನೊಂದಿಗೆ ಸಮಾಧಿಗೆ ಹೋಗುತ್ತವೆ” ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ನನ್ನ ಜೊತೆ ಈ ಹಿಂದೆ ಇದ್ದ ಎಲ್ಲಾ ಗೆಳತಿಯರು ಒಳ್ಳೆಯವರಾಗಿದ್ದರು, ಮೊದಲ ಗೆಳತಿ ನನ್ನಿಂದ ದೂರವಾದಾಗ ತಪ್ಪು ನನ್ನಲ್ಲಿದೆ, ಎರಡನೆಯವರು ಮತ್ತು ನಂತರ ಮೂರನೆಯವರು ಹೋದಾಗ, ತಪ್ಪುಗಳಾಗಿರಬಹುದು ಆದರೆ ನಾಲ್ಕನೆ ಗೆಳತಿ ನನ್ನಿಂದ ದೂರವಾದಾಗ ತಪ್ಪು ಅವರದ್ದೋ ಅಥವಾ ನನ್ನದೋ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ.
ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಐದನೇ ಪ್ರಕರಣದಲ್ಲಿ,ತಪ್ಪು ೬೦:೪೦ ಆಗಿರಬಹುದು, ಆದರೆ ಹೆಚ್ಚು ಬಿಟ್ಟಾಗ, ಅದು ನನ್ನ ತಪ್ಪು ಎಂದು ದೃಢಪಡಿಸುತ್ತದೆ. ಅವರಲ್ಲಿ ನನ್ನದು ಯಾವುದೇ ತಪ್ಪಿಲ್ಲ. ನನ್ನ ತಪ್ಪು. ಬಹುಶಃ ಅವರ ಮನಸ್ಸಿನಲ್ಲಿ ಒಂದು ರೀತಿಯ ಭಯ ಇರಬಹುದು, ಬಹುಶಃ ಅವರಿಗೆ ಜೀವನದಲ್ಲಿ ಸಂತೋಷ ನೀಡಲು ಸಾಧ್ಯವಾಗುತ್ತಿಲ್ಲ ಎಂದುಕೊಂಡು ದೂರ ಹೋಗಿರಬಹುದು ಎಂದಿದ್ದಾರೆ.
ನನ್ನಿಂದ ದೂರಹೋದ ಗೆಳತಿಯರು ಎಲ್ಲೇ ಇದ್ದರೂ ಅವರೆಲ್ಲರೂ ಸಂತೋಷವಾಗಿರುತ್ತಾರೆ ಎಂದು ನನಗೆ ಖಾತ್ರಿಯಿದೆ.” ಯಾರಾದರೂ ನನ್ನನ್ನು ಮದುವೆಯಾಗುತ್ತೇನೆ ಎಂದು ಮುಂದೆ ಬಂದರೆ ಮದುವೆಯಾಗುವೆ ಎಂದು ತಿಳಿಸಿದ್ದಾರೆ.
ಸರ್ವಶಕ್ತ ದೇವರು ಬಯಸಿದಾಗ ನಾನು ಮದುವೆಯಾಗುತ್ತೇನೆ. ಇಬ್ಬರು ವ್ಯಕ್ತಿಗಳು ಬೇಕಾಗಿದ್ದಾರೆ. ಮೊದಲ ಸಂದರ್ಭದಲ್ಲಿ, ಮದುವೆ ಆಗಲಿಲ್ಲ. ಮೊದಲು ಮದುವೆಯಾಗುತ್ತೇನೆ ಎಂದಾಗ ಅವರು ಇಲ್ಲ ಎಂದರು. ಇನ್ನೊಬ್ಬರು ಮದುವೆಯಾಗುತ್ತೇನೆ ಎಂದಾಗ ಇಲ್ಲ ಎಂದೆ. ಮದುವೆ ಎಂದರೆ ಎರಡೂ ಕಡೆಯಿಂದ ಒಪ್ಪಿಗೆ ಇರಬೇಕು ಎಂದಿದ್ದಾರೆ.
ನನಗೆ ಈಗ ೫೭ ವರ್ಷ. ಈ ವಯಸ್ಸಿನಲ್ಲಿ ನನ್ನನ್ನು ಯಾರು ಮದುವೆಯಾಗಲು ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದ ಸಲ್ಮಾನ್ ಖಾನ್, ಮನೆಯವರಿಗೆ ನಾನು ಮದುವೆಯಾಗಬೇಕು ಎಂದು ಬಯಸುತ್ತಾರೆ.ಈಗ ಅದು ಸಾಧ್ಯವೇ ಎಂದಿದ್ಧಾರೆ.
ಆಪ್ ಕಿ ಅದಾಲತ್‌ನಲ್ಲಿ ಸಂದರ್ಶಕರ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರ ನೀಡುವ ಮೂಲಕ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮತ್ತಷ್ಟು ಹತ್ತಿರವಾಗಿದ್ದಾರೆ.