ದೇವರು ನಮ್ಮ ಅಂತರಂಗದಲ್ಲಿಯೇ ಇರುವನು : ವಿಶ್ವರಾಧ್ಯ ಸತ್ಯಂಪೇಟೆ

ಭಾಲ್ಕಿ:ಮಾ.12: 56ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ಗಂಗಾಂಬಿಕಾ ಸತೀಶ ಅಷ್ಟೂರೆ, ಅಷ್ಟೂರೇ ಕಲ್ಯಾಣ ಮಂಟಪದ ಎದುರಿಗೆ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಹಾಗೂ ಪೂಜ್ಯಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ವಹಿಸಿದರು. ಬಸವಲಿಂಗ ದೇವರು ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ಸುವರ್ಣ ಸಂಗಮೇಶ ಬಳತೆ ಬಸವ ಪ್ರಾರ್ಥನೆ ನೆರವೇರಿಸಿದರು. ವೇದಿಕೆಯ ಮೇಲೆ ರೇಖಾಬಾಯಿ ರಾಜಶೇಖರ ಅಸ್ಟೂರೆ ಉಪಸ್ಥಿತರಿದ್ದರು. ಮಲ್ಲಮ್ಮ ನಾಗನಕೆರೆ ಸ್ವಾಗತಿಸಿದರು. ವಿಶ್ವಾರಾಧ್ಯ ಸತ್ಯಂಪೇಟೆ ವಚನ ಗಾಯನದ ಮೂಲಕ ದೇವನೊಬ್ಬನೆ, ಜಗತ್ತಿನಲ್ಲಿ ಯಾರೂ ಮೇಲಲ್ಲ ಯಾರು ಕೀಳಲ್ಲಾ ಜಾತಿ ಮತ ಇವೆಲ್ಲ ನಾವು ಮಾಡಿಕೊಂಡದ್ದು ಮನುಷ್ಯರಾಗಿ ಬಾಳುವುದು ಮಾನವೀಯತೆ ತೋರುವುದು, ದೇವರು ನಮ್ಮ ಅಂತರಂಗದಲ್ಲಿ ಇರುವನು, ಅಂತಹ ಆಂತರಿಕ ಶಕ್ತಿಯನ್ನು ಅರಿತು ಜಗತ್ತಿನಲ್ಲಿ ಬದುಕಬೇಕು ಎನ್ನುವ ಮಾತುಗಳನ್ನು ಎಲ್ಲರಿಗೂ ಮುಟ್ಟುವಂತೆ ಸರಳವಾಗಿ ಹಾಡಿ ಹೇಳಿದರು. ಬಸವರಾಜ್ ಮರೆ, ಶಾಂಬುಲಿಂಗ ಕಾಮಣ್ಣ, ವೀರಣ್ಣ ಕುಂಬಾರ, ಜಯಪ್ರಕಾಶ ಕುಂಬಾರ, ಓಂಕಾರ ಶರಣರು, ಶರಣಪ್ಪಾ ರುಮ್ಮಾ, ಪಾರ್ವತಿ ದುಮ್ಮನಸುರೆ, ಶ್ರೀದೇವಿ ಶಿರ್ಗಪೂರ್ ಹಾಗೂ ಅನೇಕರು ಉಪಸ್ಥಿತರಿದ್ದರು. ಸುರೇಖಾ ಬಸವರಾಜ ಬೇಲೂರೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶ್ರೀದೇವಿ ಶಾಂತಯ್ಯ ಸ್ವಾಮಿ ಹಾಗೂ ವೇದಿಕೆಯ ಮೇಲಿದ್ದ ಗಣ್ಯರನ್ನು ಗೌರವ ಸನ್ಮಾನ ಮಾಡಲಾಯಿತು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.