
ಸಂಜೆವಾಣಿ ವಾರ್ತೆಸಿರುಗುಪ್ಪ, ಅ.20: ನಗರದ ಅಭಯ ಆಂಜನೇಯ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತದ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಉಳುವವನೆ ಭೂಮಿಯ ಒಡೆಯ ಕಾನೂನು ಯಶಸ್ವಿಯಾಗಿ ಜಾರಿಗೆ ತಂದ, ಗ್ರಾಮೋತ್ಥಾನಕ್ಕೆ ನಾಂದಿ ಹಾಡಿದ, ಹಿಂದುಳಿದ ವರ್ಗಗಳ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರಾದ ಶ್ರೀ ಡಿ.ದೇವರಾಜ ಅರಸು ರವರ 108ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಶಾಸಕ ಬಿ.ಎಂ ನಾಗರಾಜ ಮಾತನಾಡಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್, ತಾಲೂಕು ವ್ಯೆದ್ಯಾಧಿಕಾರಿ ಈರಣ್ಣ, ಹಿಂದುಳಿದ ಅಧಿಕಾರಿ ಗಾದಿಲಿಂಗಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಕಾಂಗ್ರೇಸ್ ಮುಖಂಡರಾದ ನರೇಂದ್ರ ಸಿಂಹ, ಮಲ್ಲಿಕಾರ್ಜುನ ಇನ್ನಿತರರು ಇದ್ದರು.
One attachment •