ದೇವರನ್ನೇ ಕದ್ದೊಯ್ದ ಖದೀಮರು

ಕಲಬುರಗಿ ;ನ.28: ಕೈ ಮುಗಿದು ಪ್ರಾರ್ಥನೆ ಮಾಡಿ ವರ ಕೇಳಬೇಕಾದ್ದ ಪವಿತ್ರ ದೇವಸ್ಥಾನದ ಬೀಗ ಮುರಿದು ದೇವರ ಮೂರ್ತಿಯನ್ನೆ ಕದ್ದೋಯ್ದಿದಿರುವ ಘಟನೆ ಆಳಂದ ತಾಲೂಕಿನ ನಿಂಬರಗಾ ಗ್ರಾಮದಲ್ಲಿ ನಡೆದಿದೆ.
ಹಣ ವಡವೆ ಮನೆ ಕಳ್ಳತನ ಮಾಡುವ ಪ್ರಕರಣಗಳನ್ನು ನಾವು ಕಂಡಿದ್ದೇವೆ ಆದರೆ ದೇವರನ್ನೆ ಕಳ್ಳತನ ಮಾಡುವ ಪ್ರಕರಣಗಳು ಅಪರೂಪ ಇಂಥ ಒಂದು ಪ್ರಸಂಗ ಸುಪ್ರಸಿದ್ದ ನಿಂಬರಗಾ ಗ್ರಾಮದಲ್ಲಿ ನಡೆದಿದರುವುದು ಜನರನ್ನು ಅಚ್ಚರಿ ಮೂಡಿಸಿದೆ. ಗ್ರಾಮದ ಆರಾದ್ಯ ದೈವವಾಗಿದ್ದ ಶರಣ ಬಸವೇಶ್ವರg ದೇವಸ್ಥಾನ ಪವಿತ್ರವಾಗಿರವುದು ಆದರೆ ಅಂಥ ದೇವಸ್ಥಾನದ ಬೀಗ ಮುರಿದು ಶರಣ ಬಸವೇಶ್ವರರ ಎರಡುವರೆ ಕೆ.ಜಿ ತೂಕದ ಬೆಳ್ಗ್ಭಿ ಮೂರ್ತಿ ಲಿಂಗಾಕಾರಗಳನ್ನು ಶುಕ್ರವಾರ ರಾತ್ರಿ ಕಳ್ಳರು ಕಳ್ಳತನ ಮಾಡಿದ್ದಾರೆ.
ಎಂದಿನಂತೆ ಮಠದ ಪೂಜಾರಿ ಹಿಂದಿನ ರಾತ್ರಿ 10ಗಂಟಗೆ ಬೀಗ ಹಾಕಿ ಮನೆಗೆ ಬಂದಿದ್ದಾರೆ, ಮುಂಜಾನೆ ಎದ್ದು ಪೂಜೆ ಮಾಡಲು ಹೋದಾಗ ದೇವಸ್ತಾನದ ಬೀಗ ಮುರಿದಿರುವುದು ಕಂಡು ಬಂದಿದ್ದು ಒಳಗೆ ಹೋಗಿ ನೀಡಿದರೆ ದೇವರನ್ನೆ ಕಳ್ಳತನ ಮಾಡಿರುವುದು ಕಂಡು ಬಂದಿದೆ
ಈ ವಿಷಯ ತಿಳಿಯುತಿದ್ದಂತೆ ಗ್ರಾಮದ ಜನ ಜಮಾಯಿಸಿದ್ದಾರೆ ಗ್ರಾಮದಲ್ಲೆ ಪೋಲಿಸ್ ಠಾಣೆ ಇದ್ದರೂ ಕೂಡಾ ಪವಿತ್ರ ದೇವಾಸ್ಥನ ಕಳ್ಳತನ ಆಗಿರುವುದು ಸಾರ್ವಜನಿಕರಲ್ಲಿ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತಾಗಿದೆ. ದೇವರ ಮೂರ್ತಿ ಸೇರಿ 3ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಈ ಕುರಿತು ಸ್ಥಳಿಯ ಪೋಲಿಸ್ ಠಾಣೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದೂರು ದಾಖಲಿಸಿದೆ ಸ್ಥಳಕ್ಕೆ ಪಿ.ಎಸ್.ಐ ಸುವರ್ಣ ಬೇಟಿ ನೀಡಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಭರಸೆ ನೀಡಿ ತನಿಖೆ ಕೈಗೊಂಡಿದ್ದಾರೆ.