ದೇವನ ತೆಗನೂರ: ಮಹಾಶರಣ ಬಿಲ್ಲಮರಾಜನ ಪುರಾಣ

ಕಲಬುರಗಿ,ಮಾ.30-ಸುಕ್ಷೇತ್ರ ದೇವನ್ ತೆಗನೂರಿನಲ್ಲಿ ಕರಡಕಲ್ಲು ಮಹಾಶರಣ ಬಿಲ್ಲಮರಾಜನ ಪುರಾಣದ ಉದ್ಘಾಟನೆ ನಡೆಯಿತು.
ಸಮಾರಂಭದ ನೇತೃತ್ವವನ್ನು ಮುಗಳನಾಗಾಂವನ ಅಭಿನವ ಶಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಲಬುರಗಿ ಗದ್ದುಗೆ ಮಠದ ನಿರಂಜನ ಚರಲಿಂಗ ಮಹಾಸ್ವಾಮಿಗಳು, ಸಾನಿಧ್ಯವನ್ನು ಮಹಾಶರಣ ಬಿಲ್ಲಮ ರಾಜರ ಗುರು ಪರಂಪರೆಯವರಾದ ನಾವದಗಿಯ ಬ್ರಹ್ಮನ ಮಠದ ಚರ ಸ್ಥಿರ ಪಟ್ಟಾಧ್ಯಕ್ಷರಾದ ರಾಜೇಂದ್ರ ಒಡೆಯರು, ಸಮ್ಮುಖವನ್ನು ಚಬನೂರನ ಜ್ಯೋತಿಷ್ಯ ವಿದ್ವಾನ್ ರಾಮಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
11 ದಿವಸಗಳ ಪಯರ್ಂತರ ನಡೆಯುವ ಪುರಾಣ-ಪ್ರವಚನವನ್ನು ನಗರದ ಹೆಸರಾಂತ ಹಾಸ್ಯ ಚಕ್ರವರ್ತಿಗಳಾದ ವೇ. ಮೂ. ಪಂಡಿತ ಸಿದ್ದೇಶ್ವರ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ, ಸಂಗೀತ ವಿನೋದ್ ಕುಮಾರ್ ದಸ್ತಾಪುರ್, ಷಣ್ಮುಖಯ್ಯ ಸ್ವಾಮಿ ಮುತ್ತಗಾ, ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶಂಕರ್ ಬಾಬು ಕಣಕಿ, ಉಪಾಧ್ಯಕ್ಷರಾದ ವಿಶ್ವನಾಥ್ ಗೌಡ ಧರ್ಮಾನಂದ, ಸೋಮಶೇಖರ್ ಮಕ್ಕಾಶಿ, ಜಗನ್ನಾಥ್ ಸರಡಗಿ, ಪಪ್ಪು ಸಾಹುಕಾರ ಕಣಕಿ, ಬಸನಗೌಡ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ನಾವದಗಿ, ಸಂಚಾಲನೆಯನ್ನು ಸಿದ್ದಲಿಂಗಶೆಟ್ಟಿ ಶಿರವಾಳ್, ದೇವನ ತೆಗನೂರ್ ,ನಾವದಗಿ, ಮುಗುಳ್ನಾಗಾವಿ ,ನಂದೂರ್, ಕಲ್ಬುರ್ಗಿ ಸುತ್ತಮುತ್ತಲಿನ ಹಳ್ಳಿಯ ಭಕ್ತಾದಿಗಳು ಉಪಸ್ಥಿತರಿದ್ದರು.