ದೇವನೂರು ಬರೆದಿರುವ ಆರ್ ಎಸ್ ಎಸ್ ಆಳ  ಅಗಲ ಕೃತಿ ಉಚಿತ ವಿತರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.24 ಪಟ್ಟಣದ  ಅಹಿಂದ ವೇದಿಕೆಯ ಕಚೇರಿಯಲ್ಲಿ ದೇವನೂರು ಮಹಾದೇವ ಅವರು ಬರೆದಿರುವ ‘ಆರ್ ಎಸ್ ಎಸ್ ಆಳ ಅಗಲ’ ಕೃತಿಯನ್ನು ಶನಿವಾರ 300ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ವಿತರಿಸಲಾಯಿತು.
ಅಹಿಂದ ವೇದಿಕೆಯ ಜಿಲ್ಲಾ ಸಂಚಾಲಕ ಬಡ್ಡಿ ಬಸವರಾಜ್ ಪುಸ್ತಕ ವಿತರಿಸಿ ಮಾತನಾಡಿ  ಆರ್ ಎಸ್ ಎಸ್ ನ ಸಂಗತಿ ಮತ್ತು ಮೂಲ ಉದ್ದೇಶ ಹರಿಯಲು ದೇವನೂರು ಮಹದೇವ ಬರೆದಿರುವ ಈ ಕೃತಿ ಪ್ರಸ್ತುತ  ದಿನಗಳಲ್ಲಿ ಸಹಕಾರಿಯಾಗಲಿದೆ. ಇಂದಿನ ದಿನಗಳಲ್ಲಿ ನಮ್ಮನ್ನು ನಾವು ಜಾಗೃತರಾಗಬೇಕಾಗಿದೆ. ದೇಶದಲ್ಲಿ ವಿಷ ಬೀಜ ಬಿತ್ತುವವರನ್ನು ಮಟ್ಟ ಹಾಕಬೇಕಾಗಿದೆ. ಜನಜಾಗೃತಿ ಮೂಲಕ ಯುವಕರನ್ನು ಸರಿದಾರಿಗೆ ತರಲು ಪುಸ್ತಕ ಪ್ರೇರಣೆಯಾಗಲಿದೆ. ಈ ಸಂಘಟನೆ ಅನುಸರಿಸುತ್ತಿರುವ ಸಿದ್ಧಾಂತದ ಬಾದಕ ಕುರಿತು ಈ ಕಿರು ಹೊತ್ತಿಗೆ ಮಾಹಿತಿ ನೀಡುತ್ತದೆ ಎಂದರು.
 ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್ ಪದ್ಮಶಾಲಿ ಸಮಾಜದ ತಾಲೂಕ ಅಧ್ಯಕ್ಷ ಅನಿಲ್ ಜಾಣ,ಮಡಿವಾಳ ಸಮಾಜದ ಅಧ್ಯಕ್ಷ ಎಂ. ರಾಮಣ್ಣ,ಭೋವಿ ಸಮಾಜದ ಅಧ್ಯಕ್ಷ ರಾಮಣ್ಣ,ದಲಿತ ಸಮಾಜದ ಮುಖಂಡ ದೊಡ್ಡಬಸಪ್ಪ, ಮಾತನಾಡಿದರು.ಚಲವಾದಿ ಮಹಾಸಮಾಜದ ಕಾಳಿ ಬಸವರಾಜ್,, ಉಪ್ಪಾರ್ ಸಮಾಜದ ಅಧ್ಯಕ್ಷ ಜಿ ಹನುಮಂತಪ್ಪ, ಸವಿತಾ ಸಮಾಜದ ಅಧ್ಯಕ್ಷ ಸುಬ್ರಮಣಿ, ಸಿಪಿಎಂ ಪಕ್ಷದ ಮುಖಂಡ ಜಗನ್ನಾಥ ಮುಖಂಡರಾದ ಮೈಲಾರಪ್ಪ ಸರ್ದಾರ್ ಹುಲಿಯಮ್ಮ, ಇಸ್ಮಾಯಿಲ್ ಸಾಬ್, ಕೋಡಿಹಳ್ಳಿ ಮಂಜುನಾಥ ಇದ್ದರು. ಇದೇ ವೇಳೆ ರೈತ ಹತ್ತಿ ಅಡಿವೆಪ್ಪ ಇವರಿಗೆ ಸನ್ಮಾನ ಮಾಡಲಾಯಿತು. ಸುಮಾರು 14 ಸಂಘಟನೆಯ ಮುಖಂಡರು ಭಾಗವಹಿಸಿದ್ದರು.