ದೇವದುರ್ಗ ಪುರಸಭೆ ಮುಖ್ಯಾಧಿಕಾರಿ ಅಮಾನತ್ತಿಗೆ ಆಗ್ರಹ

ರಾಯಚೂರು.ನ.22- ದೇವದುರ್ಗ ತಾಲೂಕಿನ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಇವರನ್ನು ಅಮಾನತ್ತಗೊಳಿಸಿ ಕ್ರಿಮಿನಲ್ ಮೊಕ್ಕದಮೆ ದಾಖಲಿಸಲು
ದೇವದುರ್ಗ ಸ್ಥಳೀಯ ನಿವಾಸಿ ಆಳ್ಳಪ್ಪ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ದೇವದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.9 ರಲ್ಲಿ ಗೌರಮ್ಮ ಗಂಡ ಅಮರಣ್ಣ ಅವರು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯನ್ನು ತೆರವುಗೊಳಿಸಲು 2018 ರ ಮೇ 15ರಂದು ಲೋಕಾಯುಕ್ತ ಇಲಾಖೆಯಿಂದ ಮನೆ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಮತ್ತು ದೇವದುರ್ಗ ಪುರಸಭೆ ಅಧಿಕಾರಿಗಳಿಗೆ ನೋಟಿಸ್ ನೀಡಿದರೂ, ಇದುವರೆಗೂ ಮನೆಯನ್ನು ತೆರವುಗೊಳಿಸಿರುವುದಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 80 ಬಾರಿ ಜಿಲ್ಲಾಡಳಿತಕ್ಕೆ ಮತ್ತು ಪುರಸಭೆಗೆ ಮನವಿ ಸಲ್ಲಿಸಿದರೂ, ಯಾವುದೇ ಕ್ರಮಕೈಗೊಂಡಿಲ್ಲ,
ನಂತರದಲ್ಲಿ 2018 ನ.5 ರಂದು ಅಂದಿನ ಪುರಸಭೆ ಯೋಜನಾಧಿಕಾರಿಗಳು ಈರಣ್ಣ ಬಿರಾದಾರ, ಮುಖ್ಯಾಧಿಕಾರಿ ಫಿರೋಜ್ ಖಾನ್ ಇವರು ಸ್ಥಳಕ್ಕೆ ಬಂದು ಪರಿಶೀಲನೆ ನಡಿಸಿರುತ್ತಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಶರಣಪ್ಪ ಅವರು ನೀವು ಪುರಸಭೆಯ ಸ್ಥಳ ಹಾಗೂ ಸಾರ್ವಜನಿಕ ರಸ್ತೆಯನ್ನು ಅಕ್ರಮಿಸಿದ್ದೀರಿ ಎಂದು 2020 ರ ಜು.24 ರಂದು ಮತ್ತು ಜು.13 ರಂದು ನನಗೆ ನೋಟೀಸ್ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಗೌರಮ್ಮ ಗಂಡ ಅಮರಣ್ಣ ಹೇಳಿದ ಮಾತು ಹೇಳಿದ ಮಾತು ಕೇಳುತ್ತಿದ್ದಾರೆ. ಆದರೆ, ನಾವು ಹೇಳಿದ ಮಾತು ಕೇಳುತ್ತಿಲ್ಲ ಶರಣಪ್ಪ ಅವರು ಗೌರಮ್ಮ ಅವರಿಗೆ ದಲ್ಲಾಳಿ ಆಗಿ ಕೆಲಸ ಮಾಡುತ್ತಿದ್ದಾರೆ. ಕಾರಣ ಜಿಲ್ಲಾಧಿಕಾರಿಗಳು ಕೂಡಲೇ ಇವರನ್ನು ಅಮಾನತ್ತು ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ.