ದೇವದುರ್ಗ ತಾಲೂಕಿನಿಂದ ೭ ಜನ ವಿದ್ಯಾರ್ಥಿಗಳು ಅಗ್ನಿವೀರ್ ಸೈನಿಕರಾಗಿ ಆಯ್ಕೆ

ದೇವದುರ್ಗ.ಫೆ.೨೯- ದೇವದುರ್ಗ ತಾಲೂಕಿನ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ತರಬೇತಿ ಪಡೆದ ೭ಜನ ವಿದ್ಯಾರ್ಥಿಗಳು ಅಗ್ನಿವೀರ್ ಸೈನಿಕರಾಗಿ ದೇಶ ಸೇವೆಗೆ ಆಯ್ಕೆಯಾಗಿದ್ದಾರೆ ಎಂದು ಮಾಜಿ ಸೈನಿಕ ಹಾಗೂ ದೇವದುರ್ಗ ಸೈನಿಕ ಅಕಾಡೆಮಿ ತರಬೇತಿದಾರ ಪಂಪಣ್ಣ ಅಕ್ಕರಕ್ಕಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಕೊಪ್ಪರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಕ್ರೀಡಾಂಗಣದಲ್ಲಿ. ೨೦ ಜನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಯಿತು. ಅದರಲ್ಲಿ ದೇವದುರ್ಗ ತಾಲೂಕಿನ ೪ ಜನ, ವಿದ್ಯಾರ್ಥಿಗಳು ರಾಯಚೂರಿನ ೧. ಲಿಂಗಸುಗೂರು. ತಾಲೂಕಿನ ೨ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ತಾಲೂಕಿನಿಂದ ೭ ಜನ ಸೈನಿಕರಾಗಿ ಆಯ್ಕೆಯಾಗಲು ಕಾರಣರಾಗಿದ್ದಾರೆ. ದೇಶ ಸೇವೆ ಮಾಡಲು ವಿದ್ಯಾರ್ಥಿಗಳು ಉಸ್ತಕರಾಗಿದ್ದಾರೆ. ಇವರ ಆಯ್ಕೆಯಿಂದ ನಮ್ಮ ಸೈನಿಕ ಅಕಾಡೆಮಿ ತಂಡಕ್ಕೆ. ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ರೀತಿ ತಾಲೂಕಿನಲ್ಲಿ ಪ್ರತಿ ಗ್ರಾಮದ ಮನೆಗೊಬ್ಬ ವಿದ್ಯಾರ್ಥಿ ಸೈನಿಕರಾಗಲು ಸಿದ್ಧರಾಗಿರಬೇಕು ಎಂದರು. ದೇವದುರ್ಗದಲ್ಲಿ ಸೈನಿಕ ಅಕಾಡೆಮಿ ಸಂಸ್ಥೆ ನಡೆಯಲು ಸಹಕರಿಸಿದ ಉದ್ಯಮಿಗಳಾದ ಭಾನುಪ್ರಕಾಶ ಖೇಣೇದ್, ಹಾಗೂ ಸುಭಾಷ್ ಪಾಟೀಲ, ಅವರ ಬಹುದೊಡ್ಡ ಶ್ರಮ ಅಡಗಿದೆ ಈ ೭ ಜನ ವಿದ್ಯಾರ್ಥಿಗಳು ಸೈನಿಕರಾಗಿ ಆಯ್ಕೆಯಾಗಲು ಇವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಖಲೀಂ ಗಲಗ, ಭೀಮರೆಡ್ಡಿ ಗೋಗಿ, ವೀರೇಶ ಯರಗೇರಾ, ರೇಣುಕರಾಜ ಸಲಿಕ್ಯಾಪುರ, ನರಸಣ್ಣ ಸೋಮನಮರಡಿ, ದಾವುದ್ ಇಬ್ರಾಹಿಂ ಲಿಂಗಸೂಗೂರು, ಬಸವರಾಜ ಅಡಿವಿಬಾವಿ, ಸೇರಿದಂತೆ ಇತರರು ಇದ್ದರು.