ದೇವದುರ್ಗ ತಾಲೂಕಿನಿಂದ ವಾಹನ ವ್ಯವಸ್ಥೆ: ರಾಜಶೇಖರ್ ನಾಯಕ

ಸಿದ್ರಾಮೋತ್ಸವಕ್ಕೆ ಲಕ್ಷಾಂತರ ಕಾರ್ಯಕರ್ತರು ಭಾಗಿ ಆ.೩ರಂದು ಕಾರ್ಯಕ್ರಮ
ದೇವದುರ್ಗ.ಜು.೩೦- ಆ.೩ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ರಾಮೋತ್ಸವಕ್ಕೆ ತಾಲೂಕಿನಿಂದ ಸುಮಾರು ಹತ್ತು ಸಾವಿರ ಜನರು ತೆರಳಿದ್ದಾರೆ ಎಂದು ಜಿಲ್ಲಾ ಆರ್‌ಡಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ್ ನಾಯಕ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು ೭೫ನೇ ಜನ್ಮದಿನ ಕಾರ್ಯಕ್ರಮವನ್ನ ದಾವಣಗೆರೆಯಲ್ಲಿ ಸಿದ್ರಾಮೋತ್ಸವಕ್ಕೆ ಸಿದ್ದತೆ ನಡೆದಿದ್ದು, ಸುಮಾರು ೧೦ ಹತ್ತು ಜನ ಸೇರಲಿದ್ದಾರೆ ಎಂದರಲ್ಲದೆ, ತಾಲೂಕಿನ ಹೋಬಳಿಗೊಂದು ಬಸ್, ಪಂಚಾಯತ್ ವ್ಯಾಪ್ತಿಯಲ್ಲಿ ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ತಾಲೂನಿಂದ ಆ.೨ರಂದು ಮಂಗಳವಾರ ಸಂಜೆ ದಾವಣಗೆರೆಗೆ ತೆರಳಿಲಿದ್ದು, ಅರಕೇರಾದ ತಮ್ಮ ನಿವಾಸದಲ್ಲಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ದೆ, ರಾಜನಹಳ್ಳಿಯ ಗುರುಪೀಠದಲ್ಲಿ ರಾಯಚೂರು ಜಿಲ್ಲೆಯ ಕಾರ್ಯಕರ್ತರು, ಮುಖಂಡರಿಗೆ ಊಟ, ವಸತಿ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಜೆವಾಲಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆ ಜನರು ಸಿದ್ರಾಮೋತ್ಸವಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಬ್ಲಾಕ್ ಕಾಂಗ್ರೆಸ್ ಅಬ್ದುಲ್ ಅಜೀಜ್, ಆದನಗೌಡ ಬುಂಕಲದೊಡ್ಡಿ, ರಾಮಣ್ಣ ಇರಬಗೇರಾ, ಮಾನಪ್ಪ ಮೇಸ್ತ್ರಿ, ಖಾಜಾ ಹುಸೇನ್, ರಂಗಪ್ಪ ಗೋಸಲ, ಅಮರೇಶ್ ಪಾಟೀಲ್, ನಾಗರಾಜ್ ಪಾಟೀಲ್, ಸುಲ್ತಾನ್ ಬಾಬು, ಮರೆಯಣ್ಣ ನಾಯಕ ಮಂದಕಲ್ ಇತರರಿದ್ದರು.