ದೇವದುರ್ಗ ತಾಲೂಕಿಗೆ ಯೋಜನಾ ನಿರ್ದೇಶಕರು ಭೇಟಿ ವಿವಿಧ ಕಾಮಗಾರಿಗಳ ಪರಿಶೀಲನೆ

ರಾಯಚೂರು,ಜೂ.೧೭-
ಜಿಲ್ಲೆಯ ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಯ ಕಾಮಕಾರಿಗಳಾದ ಎಸ್.ಎಚ್.ಜಿ ಶೆಡ್ಡು, ಬದು ನಿರ್ಮಾಣ, ಕಲ್ಯಾಣೀ ಪುನಶ್ಛೇತನ ಹಾಗೂ ೧೫ನೇ ಹಣಕಾಸಿನ ಯೋಜನೆಗೆ ಸಂಬಂಧಿಸಿದ ಕಡತಗಳನ್ನು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಕಾಶ.ವಿ ಅವರು ಪರಿಶೀಲಿಸಿದರು.
ಅವರು ಶಾವಂತಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಶಾವಂತಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡೆಯುತ್ತಿರುವ ಕಲ್ಯಾಣೀ ಪುನಶ್ಚೇತನ, ಎಸ್.ಎಚ್.ಜಿ ಶೆಡ್ಡು, ಹಾಗೂ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರಿಗೆ ಸರ್ಕಾರದಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ನಂತರ ಗ್ರಾಮ ಪಂಚಾಯತಿ ಕಛೇರಿ ತೆರಳಿ ಸಂಬಂದಪಟ್ಟ ಅಧಿಕಾರಿ ಸಿಬ್ಬಂದಿಗಳ ಜೊತೆ ನರೇಗಾ ಮತ್ತು ೧೫ನೇ ಹಣಕಾಸು ಯೋಜನೆಗಳ ಸಂಬಂಧಿಸಿದಂತೆ ಕಡತಗಳನ್ನು ಪರಿಶೀಲಿಸಿ, ಮಾಹಿತಿಯನ್ನು ಕಲೆ ಹಾಕಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಹಾಯಕರು, ಐಇಸಿ ಸಂಯೋಜಕರು, ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.