ದೇವದುರ್ಗ ಟ್ರಾಫಿಕ್ ಪಿಎಸ್‌ಐನಿಂದ ಬಡವರ ಮೇಲೆ ದರ್ಪ

ಗಬ್ಬೂರು.ಮಾ.೨೮-ಹಿಂದೂಳಿದ ದೇವದುರ್ಗ ತಾಲೂಕಿನಲ್ಲಿ ಒಂದು ಒತ್ತು ಊಟಕ್ಕೆ ದುಡಿದು ತಿನ್ನುವ ಬಡ ಕೂಲಿ ಕಾರ್ಮಿಕರ ಮೇಲೆ ದೇವದುರ್ಗದ ಟ್ರಾಫಿಕ್ ಪ್ರಭಾರಿ ಪಿಎಸ್‌ಐ ಯಾದ ಲೇಡಿ ಮಂಗಮ್ಮ ಅವರು ಬಡವರ ಮೇಲೆ ಏಕೆ? ನಿಮ್ಮ ದರ್ಪ ತೋರಿಸುತ್ತಿರಿ ಎಂದು ವಾಹನದಲ್ಲಿ ಇದ್ದ ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಏನಿದ್ದರೂ ನಿಮ್ಮ ಪೌರುಷ, ದರ್ಪ, ಹಲ್ಲೆ, ದೌರ್ಜನ್ಯ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವ ದಂಧಕೊರರ ಮೇಲೆ ತೋರಿಸಿ.ಬಡ ಕೂಲಿ ಕಾರ್ಮಿಕರ ವಾಹನಗಳ ಚಾಲಕರ ಮೇಲೆ ಅಲ್ಲ ಎಂದು ಜೆಡಿಎಸ್ ಮುಖಂಡಳಾದ ಕರೆಮ್ಮ ಜಿ.ನಾಯಕಿ ಕಿಡಿಕಾರಿದರು.ವಾಹನ ತಡೆದು ಚಾಲಕನಿಗೆ ಹೊಡೆದಿದ್ದು ಅಲ್ಲದೆ ವಾಹನದಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಪೊಲೀಸ್ ದೌರ್ಜನ್ಯ ತಿಳಿದ ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿನ ಸಮಸ್ಯೆ ಬಗೆಹರಿಸಿ. ತಾಲೂಕಿನ ಬಡ ಜನತೆ ಮೇಲೆ ಹಲ್ಲೆ, ದರ್ಪ ಹೀಗೆ ಮುಂದುವರಿದರೆ ಪಕ್ಷದಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.ಚಾಲಕರು ಕಾನೂನು ಉಲ್ಲಂಘನೆ ಮಾಡದಂತೆ ಅಧಿಕಾರಿಗಳ ಜೊತೆ ಗೌರವದಿಂದ ನಡೆಯುವಂತೆ ಅಲ್ಲಿನ ಜನರಿಗೆ ತಿಳಿ ಹೇಳಿ ಶಾಂತಿಯುತ ಗೊಳಿಸಿದರು.
ಕಿuiಛಿಞ ಖeಠಿಟಥಿ