ದೇವದುರ್ಗ-ಘತ್ತರಗಿ-ಗಾಣಗಪೂರ ನಡುವೆ ನೂತನ ಬಸ್ ಸೇವೆ ಆರಂಭ

ಕೆಂಭಾವಿ : ಸೆ.7:ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರ ವಿಭಾಗದಿಂದ ದೇವದುರ್ಗ-ಘತ್ತರಗಿ-ಗಾಣಗಪೂರ ನಡುವೆ ನೂತನ ಬಸ್ ಆರಂಭಿಸಲಾಗಿದೆ.
ನೂತನ ಬಸ್‍ಗೆ ಇತ್ತಿಚೇಗೆ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ್ ಅವರು ಪೂಜೆ ಸಲ್ಲಿಸಿದರು.
ಈ ಬಸ್ ಬೆಳಿಗ್ಗೆ 7 ಗಂಟಗೆ ದೇವದುರ್ಗ ಬಿಟ್ಟು ಸುರಪುರ, ಕೆಂಭಾವಿ, ಮಳ್ಳಿ,ಮಾರ್ಗವಾಗಿ ಯಡ್ರಾಮಿ,ಅರಳಗುಂಡಗಿ,ಬಗಲೂರ ಮಾರ್ಗವಾಗಿ ಶ್ರೀ ಭಾಗ್ಯವಂತಿದೇವಿ ನೆಲಸಿದ ಘತ್ತರಗಾದಿಂದ ಅಫಜಲಪೂರ ಮೂಲಕವಾಗಿ ದತ್ತಾತ್ರೇಯ ಅವರ ಕ್ಷೇತ್ರವಾದ ಗಾಣಗಪೂರಕ್ಕೆ ತಲುಪಲಿದೆ.
ಪ್ರಯಾಣಿಕರ ಬಹುದಿನ ಬೇಡಿಕೆಯಾಗಿದ್ದ ಈ ಮಾರ್ಗವಾಗಿ ಬಸ್ ಸಂಚಾರ ಇದೀಗ ಪ್ರಾರಂಭವಾಗಿದ್ದು, ಭಕ್ತಾಧಿಗಳು ಇದರ ಸದುಪಯೋಗಪಡಿಯುವಂತೆ ಸಾರಿಗೆ ನಿಗಮದ ವತಿಯಿಂದ ತಿಳಿಸಿದೆ. ಈ ಬಸ್‍ನ್ನು ಆರಂಭಿಸಿದಕ್ಕೆ ಕೆಂಭಾವಿ ನಾಗರೀಕರ ಹಿತರಕ್ಷಣಾ ಸಮಿತಿ ವತಿಯಿಂದ ಕೆಕೆಆರ್‍ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಶಾಸಕರಿಗೆ ಅಭಿನಂಧನೆ ಸಲ್ಲಿಸಿಲಾಗಿದೆ.