ದೇವದುರ್ಗದ ಮೂಲಭೂತವಾದಿ ಮುಲ್ಲಾಗಳಿಂದ ಅಹ್ಮದಿಯಾರ ಮೇಲೆ ದೌರ್ಜನ್ಯ: ಕ್ರಮಕ್ಕೆ ಮನವಿ

ದೇವದುರ್ಗ, ಫೆ.19- ಇಲ್ಲಿನ ಕೆಲವು ಮೂಲಭೂತವಾದಿ ಮುಲ್ಲಾಗಳು, ಶಾಂತಿಪ್ರಿಯ ಅಹ್ಮದಿಯಾ ಮುಸ್ಲಿಮ್ ಜಮಾಅತ್‍ನ ಕೆಲವು ಸದಸ್ಯರಿಗೆ ಕಿರುಕುಳ, ದೌರ್ಜನ್ಯ, ದಬ್ಬಾಳಿಕೆ ನಡೆಸಿ ಮನಬಂದಂತೆ ಥಳಿಸಿದ್ದಲ್ಲದೇ ಅವರರಿಗೆ ಜೀವ ಬೆದರಿಕೆ ಹಾಕಿರುವುದನ್ನು ಬಲವಾಗಿ ಖಂಡಿಸಿರುವ ಭಾರತೀಯ ಅಹ್ಮದಿಯಾ ಮುಸ್ಲೀಮ ಜಮಾಆತ ಕೇಂದ್ರ ಸಮಿತಿ, ಈ ಪ್ರಕರಣದ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಅಹ್ಮದಿಯಾ ಸಮಾಜದ ಖಾಜಿ ಮೊಹ್ಮದ ರಫಿ ತಂದೆ ಖಾಜಿ ಉಸ್ಮಾನ್ ಸಾಬ್ ಹೂವಿನ ಹಡಗಲಿ ಮತ್ತು ಸೈಯದ ಫಹಿಮ ಅಹ್ಮದ ತಂದೆ ಸೈಯದ ಸಲಾಮುದ್ದೀನ ಖಾದಿಯಾನ ಇವರಿಬ್ಬರು ಕಳೆದ ಫೆ.11ರಂದು ರಾತ್ರಿ ದೇವದುರ್ಗಾದ ಅಹ್ಮದಿಯಾ ಮಸೀದಿಯಲ್ಲಿ ಉಳಿದುಕೊಂಡು ಫೆ.12ರ ಬೆಳಗಿನ ಜಾವ ನಮಾಜ ಮುಗಿಸಿಕೊಂಡು ಡ್ರೈವರ ಚಾಂದಪಾಶಾ ಯಾದಗಿರ ಮತ್ತು ಜಾವೀದ ದೇವದುರ್ಗಾ ನಾಲ್ವರು ಸೇರಿಕೊಂಡು ವಾಯುವಿಹಾರಕ್ಕೆ ಹೋದಾಗ ಬೆಳಿಗ್ಗೆ 7ರ ಸುಮಾರಿನಲ್ಲಿ ಇವರೆಲ್ಲರನ್ನು ತಡೆದ ಕಟ್ಟರವಾದಿ ಮುಲ್ಲಾಗಳು, ನೀವೆಲ್ಲರೂ ಮುಸ್ಲೀಮರೇ ಅಲ್ಲ, ದೇವತಗಲ್ ಗ್ರಾಮದ ಅಹ್ಮದಿಯಾ ಮಸೀದಿಯಲ್ಲಿ ಇಸ್ಲಾಂ ಧರ್ಮದ ಭೋದನೆ ಏಕೆ ಮಾಡಿದಿರಿ ಎಂದು ಜಗಳ ತೆಗೆದು ಬೈದಾಡಿ ನಿಂದಿಸಿದ ಹಲ್ಲೆ ನಡೆಸಿದ ಅವರೆಲ್ಲರೂ ಅಂಗಿಯನ್ನು ಹರಿದು ಹಾಕಿ ದೌರ್ಜನ್ಯ ಎಸಗಿರುವ ಇವರೆಲ್ಲರ ವಿರುದ್ದ ಪ್ರಕರಣ ದಾಖಲಿಸಲು ಹೋಗುವಾಗ ನೊಂದವರನ್ನು ಪನಃ ತಡೆದ ಮುಲ್ಲಾಗಳು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಫೆ.14ರಂದು ದೇವದುರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೆಲವು ಜನ ಕಟ್ಟರ ಮುಲ್ಲಾಗಳ ಪ್ರಚೋದನೆಗೆ ಒಳಗಾಗಿದ್ದ ಮುಸ್ಲಿಮರ ಗುಂಪು ಅಹ್ಮದಿಯಾರ ಮೇಲೆ ದಾಳಿ ಮಾಡಿ ಥಳಿಸಿ ಅವರನ್ನು ಗ್ರಾಮದಿಂದ ಹೊರಹಾಕಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿರುವ ಅಹ್ಮದಿಯಾ ಜಮಾಆತ್, ಸಂವಿಧಾನವನ್ನು ಗೌರವಿಸುವವರು, ಇಂತಹ ಕೃತ್ಯಗಳಿಗೆ ಕೈಹಾಕುವುದಿಲ್ಲ ಆದರೇ ಕಟ್ಟರ್ ಮೂಲಭೂತ ವಾದವನ್ನು ಮುಲ್ಲಗಳು, ದಬ್ಬಾಳಿಯ ಮೂಲಕ ಜಾರಿಗೆ ತರಲು ಮುಗ್ದ ಮುಸ್ಲೀಮರನ್ನು ಪ್ರಚೋದಿಸುತ್ತಿರುವರರ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕಟಣೆಯ ಮೂಲಕ ಸಂಘಟನೆ ಒತ್ತಾಯಿಸಿದೆ.
ಮುಸಲ್ಮಾನ ಯಾರು? ಎಂದರೆ ತನ್ನ ಕೈ ಮತ್ತು ನಾಲಿಗೆಯಿಂದ ಇನ್ನೊಬ್ಬರಿಗೆ ನೋವುಂಟು ಮಾಡದೇ ಎಲ್ಲರಿಗೆ ಸುರಕತೆ ನೀಡುವವರು ಆಗಿದ್ದಾರೆ ಅವರೇ ನಿಜವಾದ ಮುಸಲ್ಮಾನನೆಂದು ಪ್ರವಾದಿಗಳು ಹೇಳಿದ್ದಾರೆ. ಆದರೆ ಈ ನಾಮದಾರಿ ಕಟ್ಟರ್ ಮುಲ್ಲಾಗಳು ನೈಜವಾದದ ಇಸ್ಲಾಮಿನ ಬೋಧನೆಗಳ ವಿರುದ್ಧ ನಡೆದು ಕೊಳ್ಳುತ್ತಿರುವುದರಿಂದಾಗಿ ಇಂತಹ ಅಮಾನವೀಯ ಘಟನೆಗಳಿಗೆ ಸಾಕ್ಷಿಯಾಗಿದೆ.
ದೇವದುರ್ಗದಲ್ಲಿ ನಡೆದ ಈ ಅಹಿತಕರ ಘಟನೆಯಿಂದ ಸಮುದಾಯಕ್ಕೆ ಅತೀವ ದುಃಖವಾಗಿದೆ. ಅಹ್ಮದಿಯಾ ಮುಸ್ಲಿಂ ಜಮಾಅತ್ “ಎಲ್ಲರೊಡನೆ ಪ್ರೀತಿ ಮತ್ತು ಯಾರೊಡೆಯು ದ್ವೇಷವಿಲ್ಲ” ಎಂಬ ತತ್ವವನ್ನು ಮೈಗೊಡಿಸಿಕೊಂಡಿದೆ. ಅಲ್ಲದೇ ಈ ಜಮಾಅತ್ ಶಾಂತಿ, ಭದ್ರತೆ, ಸೌಹಾರ್ದತೆ, ಭ್ರಾತೃತ್ವ, ಸಹೋದರತ್ವ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಮತ್ತು ವಿವಿಧ ಸಮುದಾಯಗಳು ಮತ್ತು ಧರ್ಮಗಳ ನಡುವೆ ಸಾಮರಸ್ಯ ಮತ್ತು ಏಕತೆಯನ್ನು ಸ್ಥಾಪಿಸಲು ಶ್ರಮಿಸುವ ಜಮಾಅತ್ ಆಗಿದೆ.
ಅಹ್ಮದಿಯಾ ಮುಸ್ಲೀಮ ಜಮಾತ್ ಶಾಂತಿ ಸ್ಥಾಪನೆ ಮತ್ತು ಕಾನೂನು ಸುವ್ಯವಸ್ಥೆಯ ಪಾಲನೆಗೆ ಒತ್ತು ನೀಡುವ ಜಮಾಆತ್ ಆಗಿದೆ. ಯಾವುದೇ ವಿಚಾರ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯ ಮತ್ತು ಅನುಮಾನಗಳನ್ನು ಪರಿಹರಿಸಬಹುದು ಎಂದು ನಂಬುತ್ತದೆ ವಾಸ್ತವದಲ್ಲಿ ಇಸ್ಲಾಂ ಧರ್ಮವು ಹಿಂಸೆಯನ್ನು ಎಂದಿಗೂ ಅನುಮತಿಸುವುದಿಲ್ಲ. ಇದಕ್ಕಾಗಿಯೇ ಅಹ್ಮದಿಯಾ ಜಮಾಆತ್ ಈ ಮುಲ್ಲಾಗಳ ವಿರುದ್ಧ ಕಾನೂನು ಕ್ರಮ ಕೈಗೋಳ್ಳಲು ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಒತ್ತಾಯಿಸುತ್ತದೆ.
ಕಟ್ಟರವಾದಿ ಮುಲ್ಲಾಗಳ ಅಪಾದನೆ ಸುಳ್ಳಿನಿಂದ ಕೂಡಿರುತ್ತದೆ, ಅಹ್ಮದಿಯಾ ಮುಸ್ಲಿಮ್ ಜಮಾಅತ್ ಶಿಯಾ ಮತ್ತು ಸುನ್ನಿ ಮುಸಲ್ಮಾನರನ್ನು ಹಣದ ಆಮಿಷ ಒಡ್ಡಿ ಬಲವಂತವಾಗಿ ಅಹ್ಮದಿಯರನ್ನಾಗಿಸುವ ಪ್ರಯತ್ನಿಸುತ್ತಿದೆ ಎಂದು ಅವರ ಆರೋಪವನ್ನು ಸಾಬೀತು ಮಾಡಿ ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಟ್ಟರವಾದಿ ಮುಲ್ಲಾಗಳ ಇಂತಹ ಆರೋಪಗಳನ್ನು ಅಹ್ಮದಿಯಾ ಸಮುದಾಯ ನಿರಾಕರಿಸುತ್ತದೆ. ಮತ್ತು ಪವಿತ್ರ ಖುರ್ ಆನ್ ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತದೆ. ಧಾರ್ಮಿಕ ವಿಷಯಗಳಲ್ಲಿ ಬಲವಂತ ಮಾಡುವುದನ್ನು ಪವಿತ್ರ ಖುರ್ ಆನ್ ಸ್ಪಷ್ಟವಾಗಿ ನಿಷೇಧಿಸಿದೆ. ಅಹ್ಮದಿಯಾ ಮುಸ್ಲಿಮ್ ಜಮಾಅತ್ ಪವಿತ್ರ ಖುರ್ ಆನ್‍ನ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜಮಾಅತ್ ಆಗಿದೆ ಮತ್ತು ಈ ಜಮಾಅತ್ ಪವಿತ್ರ ಖುರ್ ಆನ್ ಪ್ರಕಾರ ಧರ್ಮದ ವಿಷಯದಲ್ಲಿ ಬಲ ಪ್ರೆಯೊಗವನ್ನು ಬಳಸುವುದು ತಪ್ಪು ಎಂದು ಪರಿಗಣಿಸುತ್ತದೆ. ಮತ್ತು ಇಂತಹ ಆಚರಣೆಗಳಲ್ಲಿ ಭಾಗಿಯಾಗುವುದಿಲ್ಲ.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ, ಅದರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಚ್ಛೆಯ ಯಾವುದೇ ಧರ್ಮವನ್ನು ಆಯ್ಕೆಮಾಡಿಕೊಳ್ಳಬಹುದು. ನಾವು ಸಹ ಇದನ್ನು ನಂಬುತ್ತೇವೆ. ನಮ್ಮ ಧೈಯವು ಧರ್ಮದ ಬೇಧವಿಲ್ಲದೆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೆ ಶಾಂತಿ, ಭದ್ರತೆ, ಪ್ರೀತಿ, ಸಹೋದರತ್ವ ಮತ್ತು ಸಹಾನುಭೂತಿಯ ಸಂದೇಶವನ್ನು ರವಾನಿಸುತ್ತದೆ.
ದೇವದುರ್ಗದಲ್ಲಿರುವ ಅಹ್ಮದಿಯಾ ಜಮಾತ್‍ಗೆ ಸೇರಿದವರಿಗೆ ಭದ್ರತೆ ಒದಗಿಸುವಂತೆ ಮತ್ತು ಹಿಂಸಾಚಾರವನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದೆ. ಮತ್ತು ಮುಸ್ಲಿಮ್ ನಾಯಕರಲ್ಲಿ ಮತ್ತು ಸಮುದಾಯದ ಮಾರ್ಗದರ್ಶಕರಲ್ಲಿ ವಿನಂತಿಸುವುದೇನೆಂದರೆ ಹಿಂಸಾಚಾರಕ್ಕೆ ಪ್ರಚೋದಿಸಲು ಬೆಂಬಲ ನೀಡುವುದನ್ನು ನಿಲ್ಲಿಸಬೇಕು, ಸಂವಾದಕ್ಕೆ ಆದ್ಯತೆ ನೀಡಿ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಬೆಳೆಸಬೇಕಾಗಿದೆ. ಇಸ್ಲಾಮಿನ ಶಾಂತಿಯುತ ತತ್ವವು ಇದೇ ಆಗಿದೆ ಎಂದು ತಿಳಿಸಿದೆ.