ದೇವದುರ್ಗದಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಿ

ದೇವದುರ್ಗ.ನ.೦೯- ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾನದಿ ನೀರಿನಿಂದ ರೈತರು ಅಪಾರ ಪ್ರಮಾಣದಲ್ಲಿ ಹತ್ತಿ ಬೆಳೆದಿದ್ದು, ಸೂಕ್ತ ಬೆಲೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಆರಂಭಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಎಪಿಎಂಸಿ ಕಾರ್ಯದರ್ಶಿ ರಂಗನಾಥಗೆ ಕರ್ನಾಟಕ ರೈತ ಸಂಘ ಮನವಿ ಸಲ್ಲಿಸಿತು.
ತಾಲೂಕಿನಲ್ಲಿ ಅಪಾರಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದ್ದು, ಸದ್ಯ ಬೆಳೆಗೆ ಕೈಗೆ ಬಂದಿದೆ. ಈ ಸಂದರ್ಭದಲ್ಲಿ ಹತ್ತಿ ಬೆಲೆ ಸಂಪೂರ್ಣ ಕುಸಿದಿದ್ದು, ಆತಂಕ ತಂದಿದೆ. ಹತ್ತಿ ಬೆಳೆಗೆ ರೈತರು ಎರಕೆ ೩೫-೪೦ಸಾವಿರ ರೂ. ಖರ್ಚು ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಕ್ವಿಂಟಾಲ್‌ಗೆ ೯ ಸಾವಿರ ರೂ. ಇದ್ದ ಬೆಲೆ ಸದ್ಯ ೭೫೦೦ರೂ.ಗೆ ಕುಸಿದಿದೆ. ಅಲ್ಲದೆ ಹತ್ತಿ ಮಿಲ್‌ನಲ್ಲಿ ಮೂರು ಕೆಜಿ ಸೂಟ್ ಮುರಿಯುವ ಜತೆಗೆ ತೂಕದಲ್ಲಿ ಭಾರಿ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಬೆಂಬಲಬೆಲೆಯೊಂದಿಗೆ ಹತ್ತಿ, ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ತಾಲೂಕಿನಲ್ಲಿ ೧೫ಹತ್ತಿ ಮಿಲ್‌ಗಳಿದ್ದು, ಎಲ್ಲ ಕೇಂದ್ರಗಳಿಗೆ ಭೇಟಿ ನೀಡಿ ತೂಕದ ಯಂತ್ರ ಪರಿಶೀಲಿಸಿ ಸೂಟ್ ಮುರಿಯದಂತೆ ಸೂಚನೆ ನೀಡಬೇಕು. ಎಲ್ಲ ಮಿಲ್‌ಗಳಲ್ಲಿ ಒಂದೇ ಬೆಲೆ ನಿಗದಿ ಮಾಡಿ ಮಿಲ್ ಮಾಲೀಕರಿಗೆ ಸೂಚನೆ ನೀಡಬೇಕು. ಕೃಷಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ದನಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ದರಪಟ್ಟಿ ನಾಮಫಲಕ ಹಾಕಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಒತ್ತಾಯಿಸಿರು.
ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗ ಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರುಗಣ್ಣ ಇರಬಗೇರಾ, ಸಹಕಾರ್ಯದರ್ಶಿ ಸಿದ್ದಲಿಂಗಪ್ಪ ಜೇರಬಂಡಿ, ಮುಖಂಡರಾದ ಗಂಗಣ್ಣ ಎನ್.ಗಣೇಕಲ್, ಮಲ್ಲೇಶ ಎನ್.ಗಣೇಕಲ್, ರಮೇಶ, ಶರಣಪ್ಪ, ಶ್ರೀನಿವಾಸ್ ಕೊಪ್ಪರ ಇದ್ದರು.