ದೇವದುರ್ಗದಲ್ಲಿ ಮೂರನೇ ದಿನದ ಲಾಕ್‌ಡೌನ್ ಯಶಸ್ವಿ

?????????????????????????????????????????????????????????????????????????????????????????????????????????????????????????????????????????????????????????????????????????????????????????

ದೇವದುರ್ಗ.ಏ.೩೦-ರಾಜ್ಯದಲ್ಲಿ ಮಹಾಮಾರಿ ಕೊರೋನಾ ಎರಡನೇ ಅಲೆ ಅಬ್ಬರಿಸಿದ್ದು. ಇದರ ಹಿನ್ನೆಲೆಯಲ್ಲಿ ಸರಕಾರ. ೧೪ ದಿನಗಳ ಅತ್ಯಂತ ಕಠಿಣವಾದ. ಲಾಕ್‌ಡೌನ್ ಅನ್ನು ಜಾರಿಗೆ ತಂದಿದ್ದು. ಇಂದು ಶುಕ್ರವಾರ ದೇವದುರ್ಗ ತಾಲೂಕಿನ ಆದ್ಯಂತ. ಮೂರನೇ ದಿನದ ಲಾಕ್‌ಡೌನ್ ಯಶಸ್ವಿಯಾಗಿ ನಡೆದಿದೆ.
ದೇವದುರ್ಗ ಪಟ್ಟಣ .ಜಾಲಹಳ್ಳಿ. ಗಬ್ಬೂರ ಮಸರಕಲ್, ಅರಿಕೇರಾ, ಸೇರಿದಂತೆ ವಿವಿಧೆಡೆ, ಸ್ವಯಂಕೃತವಾಗಿ ಅಂಗಡಿ-ಮುಂಗಟ್ಟುಗಳನ್ನು ಮಾಲೀಕರು ಬಂದ ಮಾಡಿ. ತಾಲೂಕು ಆಡಳಿತಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಸರಕಾರ ನೀಡಿದ ಬೆಳಿಗ್ಗೆ ೬:೦೦ ಯಿಂದ ೧೦:೦೦ ವರೆಗೆ ಕಿರಾಣಿ ತರಕಾರಿ, ಮಾಂಸ, ಸೇರಿದಂತೆ ವಿವಿಧ ಅಂಗಡಿ ಮಾಲೀಕರು ಸ್ವಯಂಕೃತ ೧೦:೦೦ ಬಂದ್ ಮಾಡುವ ಮೂಲಕ ತಾಲೂಕಿನಲ್ಲಿ ಮೂರನೇ ದಿನದ ಲಾಕ್‌ಡೌನ್‌ಗೆ ಕಾರಣರಾಗಿದ್ದಾರೆ.
ಜಾಗ್ರತೆ, ಪುರಸಭೆ ಕಸ ವಿಲೇವಾರಿ ವಾಹನಗಳು ಬೆಳಗ್ಗೆ ೯ ಗಂಟೆಯಿಂದ ಪಟ್ಟಣ ಉದ್ದಕ್ಕೂ ವಾಹನದ ಮೇಲೆ ಸೈರನ್ ಅಳವಡಿಸಿಕೊಂಡು ಅಂಗಡಿ-ಮುಂಗಟ್ಟು ಸಾರ್ವಜನಿಕರಿಗೆ ಲಾಕ್ಡೌನ್ ಸಮಯ ಮುಗಿಯುತ್ತಿರುವ ಬಗ್ಗೆ ಜಾಗ್ರತ ಮೂಡಿಸಲಾಗುತ್ತದೆ.
ಇದಾದ ಬಳಿಕ ಅಲ್ಲಲ್ಲಿ ಅಂಗಡಿ-ಮುಂಗಟ್ಟುಗಳನ್ನು ತೆರೆದರೆ. ಅಂತ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಅವರ ಅಂಗಡಿಗಳನ್ನು ಸೀಸ್ ಮಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.
ಈಗಾಗಲೇ ಮೂರುದಿನಗಳಿಂದ ತಾಲೂಕಿನಾದ್ಯಂತ ವಾಹನ ಸವಾರರು ಸೇರಿ ಹಲವಾರ ಅಂಗಡಿ-ಮುಂಗಟ್ಟುಗಳ ಮಾಲೀಕರ ಮೇಲೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಜನರು ಯಾವುದೇ ಕಾರಣ ಹೇಳಿ ಮನೆಯಿಂದ ಹೊರಬರದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪುರಸಭೆ ಇಲಾಖೆ ಕಟ್ಟುನಿಟ್ಟಿನ ಬಿಗಿಬಂದೋಬಸ್ತ ಕೈಗೊಂಡಿದೆ. ಪಟ್ಟಣದ ಜೈರುನುದ್ದಿನ್ ಪಾಷಾ ಸರ್ಕಲ್, ಬಸವೇಶ್ವರ ವೃತ್ತದ ಹತ್ತಿರ ಸೇರಿದಂತೆ ಹಲವು ಕಡೆ ಬೊಂಬೆ ವಿನಿಂದ ಚಿಲ್ಡನ್ ಮಾಡಲಾಗಿದೆ.
ಇದಲ್ಲದೆ ತಾಲೂಕಿನಾದ್ಯಂತ ಜನ ಬಿಡು ಪ್ರದೇಶಗಳಲ್ಲಿ ಪಿಎಸ್‌ಐ ಸೇರಿ ಪೊಲೀಸ್ ಪೇದೆ ಕರ್ತವ್ಯಕ್ಕೆ ನಿಯೋಜನೆ ಗೊಳಿಸಲಾಗಿದೆ ಒಟ್ಟಾರೆಯಾಗಿ ತಾಲೂಕಿನಲ್ಲಿ ಸರ್ಕಾರ ನೀಡಿದ ಗಡವು ನಂತರ ಯಾರೊಬ್ಬರು ರೋಡಿಗೆ ಇಳಿಯದಂತೆ ಬಿಗಿಯಾದ ಕ್ರಮ ಕೈಗೊಳ್ಳಲಾಗಿದೆ ಎಂದು ತಸಿಲ್ದಾರ್ ಮಧುರಾಜ ಯಾಳಗಿ ಸಂಜೆವಾಣಿಗೆ ತಿಳಿಸಿದ್ದಾರೆ.