ದೇವದಾಸಿ ಮಹಿಳೆಯ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ7: ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರಮಿಕ ಭವನದಿಂದ ತಹಸೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಅನಿಷ್ಟ ಪದ್ಧತಿಗಳಲ್ಲಿ ಒಂದಾಗಿರುವ ದೇವದಾಸಿ ಪದ್ಧತಿಯು ದೇಶದಲ್ಲಿ ನಿμÉೀಧಿಸಲ್ಪಟ್ಟಿದ್ದರೂ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಅನೇಕ ರಾಜ್ಯಗಳಲ್ಲಿ ಇಂದಿಗೂ ಜೀವಂತವಾಗಿದೆ. ದೇವದಾಸಿ ಮತ್ತವರ ಕುಟುಂಬಗಳ ಸ್ಥಿತಿ ಹೀನಾಯವಾಗಿದ್ದು, ಹೆಣ್ಣು ಮಕ್ಕಳ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಉದ್ಯೋಗ ಖಾತ್ರಿಯೋಜನೆಯಲ್ಲಿ ಕನಿಷ್ಠ 100 ದಿನಾ ಕೂಲಿ ಎಂದಿದ್ದರೂ ಕೇವಲು 15 ದಿನಗಳು ಮಾತ್ರ ಕೂಲಿ ನೀಡುತ್ತಿದ್ದಾರೆ. ಕಳೆದ ಮೂರ್ನಲ್ಕು ತಿಂಗಳಿಂದ ವೇತನ ನೀಡದೇ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. 4 ತಿಂಗಳಿಂದ ಮಾಶಾಸನ ಬಂದಿಲ್ಲ. ಹೊಸಪೇಟೆಯಲ್ಲಿ ನಿವೇಶನಕ್ಕಾಗಿ ಜಾಗ ನಿಗದಿಯಾದರೂ, ಕಳೆದ 3 ವರ್ಷದಿಂದ ಹಂಚಿಕೆಯಾಗಿಲ್ಲ ಎಂದು ಆರೋಪಿಸಿದ ಮಹಿಳೆಯರು ಶೀಘ್ರವಾಗಿ ಬೇಡಿಕೆಗಳನ್ನು ಈಡೇರದೇ ಹೊದಲ್ಲಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸೋಗೆ ಮಾರುಕಟ್ಟೆ, ಬಸ್‍ನಿಲ್ದಾಣ, ತಹಸೀಲ್ ಕಚೇರಿ ಸ್ಥಾನಿಕಾಧಿಕಾರಿ ಮೂಲಕ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ಮನವಿ ಪತ್ರ ರವಾನಿಸಿದರು. ಜಿಲ್ಲಾಧ್ಯಕ್ಷೆ ಕೆ.ನಾಗರತ್ನಮ್ಮ, ಅಧ್ಯಕ್ಷ ಕೆ.ಹಂಪಮ್ಮ, ಕಾರ್ಯದರ್ಶಿ ಎಸ್.ಯಲ್ಲಮ್ಮ, ಶಾಂತಮ್ಮ, ಹನುಮಂತಮ್ಮ ಹಾಗೂ ಗೌರಮ್ಮ, ಗಂಗಮ್ಮ ಇತರರು ಪಾಲ್ಗೊಂಡಿದ್ದರು.