ದೇವದಾಸಿ ಮಹಿಳೆಯರ ಹಕ್ಕೊತ್ತಾಯ ಈಡೇರಿಸುವಂತೆ ಸಚಿವರಿಗೆ ಮನವಿ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.20 :- ದೇವದಾಸಿ ಮಹಿಳೆಯರು  ಹಾಗೂ ದೇವದಾಸಿ ಮಕ್ಕಳು ಮುಖ್ಯವಾಹಿನಿಗೆ ಬರಲು ಅವರ ಹಕ್ಕೊತ್ತಾಯ ಈಡೇರಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಘಟಕ ಸಿಐಟಿಯು ಅಡಿಯಲ್ಲಿ ಮಂಗಳವಾರ  ಮಧ್ಯಾಹ್ನ ಕೂಡ್ಲಿಗಿ ತಹಸೀಲ್ದಾರ್ ಮುಖೇನಾ  ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ದೇವದಾಸಿ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷೆ ಕನಕೇರಿ ವೆಂಕಮ್ಮ ಮಾತನಾಡುತ್ತ ತಮ್ಮದಲ್ಲದ ತಪ್ಪಿಗೆ ಸಮಾಜದ ಪಟ್ಟಾಭದ್ರರು ಹೇರಲ್ಪಟ್ಟ ದೇವದಾಸಿ ಅನಿಷ್ಟ ಪದ್ದತಿಗೆ ಸಿಲುಕಿರುವ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ಕಟ್ಟಿಕೊಡಲು  ಮತ್ತು ಮಕ್ಕಳ ಮುಂದಿನ ಭವಿಷ್ಯ ನಿರ್ಮಾಣಮಾಡಿಕೊಳ್ಳಲು ರಾಜ್ಯದಲ್ಲಿ ಸಂಘಟನೆ ಮೂಲಕ ನಿರಂತರ ಹೋರಾಟದಿಂದ ದೇವದಾಸಿಯರಿಗೆ ನೀಡುವ ಮಾಸಿಕ ವೇತನ 1500ರೂ ನೀಡುವ ಜೊತೆಗೆ ಇನ್ನು 500ರೂ ಹೆಚ್ಚಿನ ಹಣ ಮಂಜೂರು ಮಾಡಿರುವುದಾಗಿ ಹೇಳಿದ ಸರ್ಕಾರ ಒಂದು ವರ್ಷವಾದರೂ ಇದುವರೆಗೂ ಹೆಚ್ಚಿನ ಹಣ ನೀಡಿಲ್ಲವಾಗಿದ್ದು ಅದನ್ನುಸರ್ಕಾರ  ತಕ್ಷಣ ಬಿಡುಗಡೆಗೊಳಿಸಬೇಕು. ದೇವದಾಸಿ ಪಟ್ಟಿಯಿಂದ ಬಿಟ್ಟುಹೋಗಿರುವ ಮಹಿಳೆಯರನ್ನು ಪುನಃ ಸೇರ್ಪಡೆ ಮಾಡಬೇಕು, ದೇವದಾಸಿ ಮಹಿಳೆಯರು ಬದುಕು ಕಟ್ಟಿಕೊಳ್ಳಲುಶೇಕಡಾ 25ರಷ್ಟು ಬಡ್ಡಿ ರಹಿತ  5ಲಕ್ಷರೂ ಸಾಲ ಸೌಲಭ್ಯ ನೀಡಬೇಕು, ಮನೆ ನಿರ್ಮಾಣಕ್ಕೆ 80*80 ಚದರಡಿ ಸರ್ಕಾರ ನಿವೇಶನ  ನೀಡಿ ಅದರಲ್ಲಿ ಮನೆ ನಿರ್ಮಿಸಿಕೊಡಬೇಕು, ದೇವದಾಸಿ ಮಕ್ಕಳ ಮದುವೆಗೆ ನೀಡುವ ಪ್ರೋತ್ಸಾಹ ಧನಕ್ಕೆ ಹೀಗಿರುವ 28ಷರತ್ತುಗಳನ್ನು ತೆಗೆದು ದೇವದಾಸಿ ಪ್ರಮಾಣಪತ್ರ ಮೇಲೆ ಪ್ರೋತ್ಸಾಹ ಧನ ನೀಡಬೇಕು, ಯೋಗ್ಯವಾದ 5ಎಕರೆ ಕೃಷಿಭೂಮಿ ನೀಡಬೇಕು,  ದೇವದಾಸಿ ಮಕ್ಕಳ ಸರ್ವೆಕಾರ್ಯ ಸಹ ಆಗಬೇಕು ಹಾಗೂ ದೇವದಾಸಿ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಕಾನೂನು ಬದ್ದ ಕ್ರಮ ಕೈಗೊಳ್ಳುವಂತ ಎಂಬಿತ್ಯಾದಿ ದೇವದಾಸಿ ಹಕ್ಕೊತ್ತಾಯವನ್ನು ಸರ್ಕಾರ ಈಡೇರಿಸಬೇಕೆಂದು ಅಧ್ಯಕ್ಷೆ ವೆಂಕಮ್ಮ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಕಾರ್ಯದರ್ಶಿ ಪಿ ದುರುಗಮ್ಮ, ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ ಸೇರಿದಂತೆ ದೇವದಾಸಿ ಮಹಿಳೆಯರು ಉಪಸ್ಥಿತರಿದ್ದು ಕೂಡ್ಲಿಗಿ ತಾಲೂಕು ಕಚೇರಿಯ ಶಿರಸ್ತೇದಾರ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.

Attachments area