ದೇವದತ್ ಪಡಿಕ್ಕಲ್ ಗೆ ಕೊರೊನಾ ಆರಂಭಿಕ ಪಂದ್ಯಕ್ಕೆ ಅಲಭ್ಯ


ಬೆಂಗಳೂರು,ಏಪ್ರಿಲ್,೪, ,ರಾಯಲ್ ಚಾಲೆಂಜರ್ಸ್ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕಲ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇದರಿಂದಾಗಿ ಆರ್ ಸಿಬಿ ಗೆ ಭಾರೀ ಪೆಟ್ಟು ಬಿದ್ದಿದೆ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪಡಿಕಲ್ ಗೆ ಸೋಂಕು ತಗುಲಿರುವುದು ಆಟಗಾರರಲ್ಲಿ ಆತಂಕ ಮನೆಮಾಡಿದೆ.
ಸದ್ಯ ದೇವದತ್ ಪಡಿಕ್ಕಲ್ ಹೊಟೇಲ್ ನಲ್ಲೇ ಐಸೋಲೇಷನ್ ಆಗಿದ್ದಾರೆ. ಏಪ್ರಿಲ್ ೯ ರಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯ ಆರ್ ಸಿಬಿ ಮತ್ತು ಮುಂಬೈ ನಡುವೆ ನಡೆಯಲಿದೆ. ಆದರೆ ಉದ್ಘಟನಾ ಪಂದ್ಯಕ್ಕೆ ದೇವದತ್ ಪಡಿಕಲ್ ಆರ್ ಸಿಬಿ ತಂಡಕ್ಕೆ ಅಲಭ್ಯವಾಗಲಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ ಆಟಗಾರ ಅಕ್ಷರ್ ಪಟೇಲ್ ಗೂ ಕೂಡ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಅವರು ಸಹ ಐಸೋಲೇಷನ್ ನಲ್ಲಿದ್ದಾರೆ.ಇನ್ನು ಡೆಲ್ಲಿ ಕ್ಯಾಪಿಟಲ್ ಆಟಗಾರ ಅಕ್ಷರ್ ಪಟೇಲ್ ಗೂ ಕೂಡ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಅವರು ಸಹ ಐಸೋಲೇಷನ್ ನಲ್ಲಿದ್ದಾರೆ.