ದೇವಣಗಾಂವ ಬಕ್ಕೇಶ್ವರ ಜಾತ್ರೆ ಮಾ.27,28 ರಂದು

ಆಲಮೇಲ:ಮಾ.25: ಇಲ್ಲಿನ ಆರಾಧ್ಯದೈವ ಗುರುಬಕ್ಕೇಶ್ವರ ಜಾತ್ರಾ ಮಹೋತ್ಸವವು ಮಾರ್ಚ 27, 28 ರಂದು ಜರುಗುವದು.
ದಿ.27 ರಂದು ಬೆಳಿಗ್ಗೆ 6ಕ್ಕೆ ಕೃತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮಾವಳಿ, ಮಂಗಳಾರುತಿ ನಡೆಯುವದು, 8ಕ್ಕೆ ಎತ್ತಿನ ಗಾಡಿಯಲ್ಲಿ ಬಕ್ಕೇಶ್ವರರ, ಲಿಂ.ಶಿವಶಂಕರ ಸ್ವಾಮಿಗಳ ಭಾವಚಿತ್ರ ಮೆರವಣಿಗೆ, ಸುಮಂಗಲೆಯರಿಂದ ಕುಂಭ ಕಳಸದ ಮೆರವಣಿಗೆಯೂ ಗ್ರಾಮದ ಪ್ರಮುಖರಸ್ತೆಗಳ ಮೂಲಕ ಭೀಮಾನದಿಗೆ ತೆರಳಿ ಗಂಗಾಪೂಜೆ ನೆರವೇರುವದು. ನಂತರ ಪ್ರಸಾದ ವಿತರಣೆ.
ಸಂಜೆ 4ಕ್ಕೆ ಕಳಸದ ಮೆರವಣಿಗೆಯೂ ಪುರವಂತರ ಸೇವೆ, ಮದ್ದು ಸುಡುವದು, ನವಿಲು ಕುಣಿತ, ಕರಡಿ ಕುಣಿತ, ಕುದುರೆ ಕುಣಿತ, ಬ್ಯಾಂಜೋ, ಹಲಿಗೆಮೇಳ, ಡೊಳ್ಳು, ಭಜನೆಗಳ ಮೂಲಕ ಗ್ರಾಮದೆಲ್ಲೆಡೆ ಸಂಚರಿಸಿ ಶ್ರೀ ಬಕ್ಕೇಶ್ವರ ಮಠಕ್ಕೆ ತಲುಪುವದು, 5ಕ್ಕೆ ರಥೋತ್ಸವವು ಅದ್ದೂರಿಯಾಗಿ ಜರುಗುವದು. ಸಂಜೆ 7ಕ್ಕೆ ಧರ್ಮಸಭೆ ಸಾನಿಧ್ಯ ಅಫಜಲಪುರ ಹಿರೇಮಠದ ವಿಶ್ವರಾಧ್ಯಮಳೇಂದ್ರ ಶ್ರೀಗಳು, ನರೋಣಾದ ಗುರುಮಹಾಂತ ಶ್ರೀಗಳು, ಅಕ್ಕಲಕೋಟ ವಿರಕ್ತಮಠದ ಬಸವಲಿಂಗ ಶ್ರೀಗಳು, ಗೌರ(ಬಿ) ಹಿರೇಮಠದ ಕೈಲಾಸಲಿಂಗ ಶ್ರಿಗಳು, ಹತ್ತಿಕಣಬಸದ ಪ್ರಭುಶಾಂತ ಶ್ರೀಗಳು ಸೇರಿದಂತೆ ಅನೇಕ ಮಠಾಧಿಪತಿಗಳು ಆಗಮಿಸುವರು.
ದಿ.28 ರಂದು ಸಂಜೆ 5ಕ್ಕೆ ಕರ್ನಾಟಕ ಮಹಾರಾಷ್ಟ್ರದ ಪ್ರಸಿದ್ದ ಪೈಲ್ವಾನರಿಂದ ಜಂಗಿ ಕುಸ್ತಿಗಳು ಜರುಗುವವು.