ದೇವಣಗಾಂವ ಗ್ರಾಪಂಗೆ ಅವಿರೋಧ ಆಯ್ಕೆ

ಆಲಮೇಲ:ಆ.7: ತಾಲೂಕಿನ ದೇವಣಗಾಂವ ಗ್ರಾಮ ಪಂಚಾಯತಗೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನೆರವೇರಿದೆ.

ಅಧ್ಯಕ್ಷರಾಗಿ ರೇಣುಕಾ ನಡುವಿನಕೇರಿ, ಉಪಾಧ್ಯಕ್ಷರಾಗಿ ಕಾಶಿಬಾಯಿ ಜೋಗೂರ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದ್ದ ಎರಡೂ ಸ್ಥಾನಗಳಿಗೆ ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ನಡುವಿನಕೇರಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಶಿಬಾಯಿ ಜೋಗೂರ ಅವರುಗಳಷ್ಟೆ  ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಚುನಾವಣಾ ಅಧಿಕಾರಿ ತಾರಾನಾಥ ರಾಠೋಡ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಐದು ಗ್ರಾಮಗಳಾದ ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುರುಬತಹಳ್ಳಿ, ಬ್ಯಾಡಗಿಹಾಳ ಗ್ರಾಮಗಳ ಒಟ್ಟು 27 ಜನ ಸದಸ್ಯರಿದ್ದಾರೆ. ಆಲಮೇಲ ಎಸೈ ಕುಮಾರ ಹಾಡಕಾರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿ ಸೂಕ್ತ ಬಂದೊಬಸ್ತ ಕೈಗೊಂಡಿತ್ತು. ಪಿಡಿಓ ಸಂತೋಷ ಅಲಹಳ್ಳಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು

ಗ್ರಾಪಂ ಸದಸ್ಯರಾದ ದವಲಪ್ಪ ಸೊನ್ನ, ಗುರುಲಿಂಗ ಕಲಶೆಟ್ಟಿ, ರಾಚಪ್ಪ ದೇಸಾಯಿ, ರಾಜಶ್ರೀ ರೋಡಗಿ, ಜೈತೂನ ವಸ್ತಾದ, ಬಸವರಾಜ ಹೀರಾಪೂರ, ತಸ್ಲಿಂಬಾನು ಮುಜಾವರ, ಸುಫಿಯಾ ನಾಗಾವಿ, ನಿಂಗಪ್ಪ ಅಳ್ಳಗಿ, ದೇವೆಂದ್ರ ದೊಡಮನಿ, ನಾನಾಗೌಡ ಅವರಾದಿ, ಶಶಿಕಲಾ ದೇವಣಗಾಂವ, ರೂಪಾ ನಂದಿ, ಚಿದಾನಂದ ಪೂಜಾರಿ, ಮುಖಂಡರಾದ ವಿಠೋಬಾ ಕಲಬಾ, ಸಾಯಬಣ್ಣ ಸೊನ್ನ, ಮಾಣಿಕ ಕಲಬಾ, ಅಂಬರೀಶ ವಾಲಿಕಾರ, ಗೋಪಾಲ ಕಡ್ಲೇವಾಡ, ಯಲ್ಲಪ್ಪ ಹೆಗ್ಗಣದೊಡ್ಡಿ, ಶಂಕರಲಿಂಗ ಸೊನ್ನ ಇದ್ದರು.