ದೇವಣಗಾಂವದಲ್ಲಿ ಕೋಟಿ ಕಂಠ ಗಾಯನ

ಆಲಮೇಲ:ಅ.31:67 ಕನ್ನಡ ರಾಜ್ಯೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ದೇವಣಗಾಂವದ ವಿದ್ಯ್ಯಾರ್ಥಿಗಳು, ಮುಖಂಡರು ಧ್ವನಿಯಾದರು.
ಇಲ್ಲಿನ ಪ್ರಗತಿ ಪರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೇಶವ ಜೋಶಿ ಮಾತನಾಡಿ ನಾಡು, ನುಡಿ, ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಂದಾಗಿ ಹೋರಾಟ ಮಾಡೋಣ ಕನ್ನಡಾಂಬೆಯ ಕೀರ್ತಿಯನ್ನು ಬೆಳಗಿಸೋಣ, ಕೋಟಿ ಕಂಠ ಕಾರ್ಯಕ್ರಮಕ್ಕೆ ಹಳ್ಳಿ ಹಳ್ಳಿಯಿಂದ ಎಲ್ಲರೂ ಒಂದಾಗಿ ದ್ವನಿ ಗೂಡಿಸಿ ಕನ್ನಡಿಗರು ನಾವೆಲ್ಲಾ ಒಂದೇ ಎನ್ನುವ ಸಂದೇಶ ಜಗತ್ತಿಗೆ ಸಾರೋಣ ಎಂದರು.
ದೇವಣಗಾಂವ ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ, ಉಪಾಧ್ಯಕ್ಷೆ ರೂಪಾ ನಂದಿ, ಪಿಡಿಓ ಶರಣಗೌಡ ಕಡ್ಲೇವಾಡ, ಪ್ರಾಚಾರ್ಯ ಸುರೇಶ ಗಂಗನಳ್ಳಿ, ಎಸ್‍ಡಿಎಂಸಿ ಅಧ್ಯಕ್ಷ ವಿಠೋಬಾ ಕಲಬಾ, ಗ್ರಾಪಂ ಸದಸ್ಯರಾದ ವಿಠ್ಠಲ್ ಯರಗಲ್, ಮುತ್ತುರಾಜ ಕಲಶೆಟ್ಟಿ, ಶಂಕರಲಿಂಗ ನಡುವಿನಕೇರಿ, ರಮೇಶ ಸೊಡ್ಡಿ, ಸಂಗನಬಸು ಸುತಾರ, ಗನಿಸಾಬ ನಾಗಾವಿ, ಸಿದ್ದಾರ್ಥ ಮೇಲಿನಕೇರಿ, ಎಂ.ಎಸ್.ಚೌಧರಿ, ಕೆ.ಡಿ.ಭೂಸನೂರ, ಚಾಂದಸಾಬ ಅಡಾಡಿ ಇದ್ದರು.