ದೇವಗಿರಿ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ


ಸಂಜೆವಾಣಿ ವಾರ್ತೆ
ಸಂಡೂರು: ಮಾ:1 ಸಂಡೂರು ವಿಧಾನಸಭಾ ಕ್ಷೇತ್ರದ ದೇವಗಿರಿ ಗ್ರಾಮ ಪಂಚಾಯಿತಿಯ 3ನೇ ಕ್ಷೇತ್ರಕ್ಕೆ ದಿನಾಂಕ 25 ರಂದು ಮತದಾನ ನಡೆಯಬೇಕಾಗಿತ್ತು, ದಿನಾಂಕ 14 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನದವರೆಗೂ ಕುತುಬ್ ಸಾಹೇಬು ತಂದೆ ಹುಚ್ಚುಸಾಬರವರನ್ನು ಹೊರತು ಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ ಕಾರಣ ಕುತುಬ್ ಸಾಹೇಬ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶಿಶು ಅಭಿವೃದ್ದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಳೆ ನಾಗಪ್ಪನವರು ಹಾಗೂ ಸಹಾಯಕ ಚುನಾವಣಾಧಿಕಾರಿ ಪಂಡಿತಾರಾದ್ಯರು ಫಲಿತಾಂಶವನ್ನು ಘೋಷಿಸಿದರು. ದೇವಗಿರಿ ಗ್ರಾಮಪಂಚಾಯಿತಿ 3ನೇ ಕ್ಷೇತ್ರಕ್ಕೆ ಬಾಬುರಾವ್ ರವರ ರಾಜಿನಾಮೆಯಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಿತು.