ದೇವಗಾಂವ ಅಧ್ಯಕ್ಷರಾಗಿ ನಾವಲಗಟ್ಟಿ ಆಯ್ಕೆ


(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ, ಆ.1: ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ತಾಲೂಕಿನ ದೇವಗಾಂವ ಗ್ರಾ.ಪಂ.ಯ ಆವರಣದಲ್ಲಿ ಜರುಗಿತು.
ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಮಲ್ಲವ್ವ ನಾವಲಗಟ್ಟಿ ಮತ್ತು ಶ್ರೀಮತಿ ಸವಿತಾ ಎಮ್ಮಿ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು.
ಒಟ್ಟು 20 ಸದಸ್ಯರ ಪೈಕಿ 11 ಮತ ಪಡೆದು ಶ್ರೀಮತಿ ಮಲ್ಲವ್ವಾ ನಾವಲಗಟ್ಟಿಯವರು ಅಧ್ಯಕ್ಷರಾದರು. ಸವಿತಾ ಎಮ್ಮಿಯವರು 9 ಮತ ಪಡೆದುಕೊಂಡು ಹಿನ್ನಡೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ರೇಣುಕಾ ಮಡಿವಾಳರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕೆಆರ್‍ಡಿಆಯ್‍ಡಿಎಲ್-ಎಇಇ ರಾಮಣ್ಣಾ ಕೆ, ಸಹಾಯಕ ಚುನಾವಣಾಧಿಕಾರಿ ಪ್ರಭಾರಿ ಪಿಡಿಓ/ಕಾರ್ಯದರ್ಶಿ ವಿನಾಯಕ ಕೊರವಿ, ಗ್ರಾ.ಪಂ ಲೆಕ್ಕ ಪರಿಶೋಧಕಿ ಶೈರಾನಬಿ ಬುಡ್ಡೇನ್ನವರ, ಕ್ಲರ್ಕ/ಡಿಇಓ ಮಂಜುನಾಥ ಕಮ್ಮಾರ, ಸಿಪಾಯಿ ಮಂಜುನಾಥ ನರಗುಂದ, ಗ್ರಾಮ ಕಾಯಕ ಮಿತ್ರ ಸಂಗೀತಾ ಪಾಗಾದ, ನಾಗರಾಜ ಕುಂಬಾರ, ಈರಣ್ಣಾ ಉಪ್ಪಾರ ಸರ್ವ ಸದಸ್ಯರು, ಗ್ರಾಮಸ್ಥರು, ಹಿರಿಯರು, ವಾಟರ್‍ಮನ್, ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಅಧ್ಯಕ್ಷಸ್ಥಾನ ಸ್ವೀಕರಿಸಿ ಮಾತನಾಡಿದ ನಾವಲಗಟ್ಟಿಯವರು ಜಾತಿ-ಪಕ್ಷ-ಭೇದ ಮರೆತು ಸರ್ವ ಸದಸ್ಯ ಮತ್ತು ಗ್ರಾ.ಪಂ. ಸಿಬ್ಬಂದಿ ಹಿರಿಯರನ್ನು ಒಗ್ಗೂಡಿಸಿಕೊಂಡು ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆಂದರು.
ಶಾಸಕ ಬಾಬಾಸಾಹೇಬ ಪಾಟೀಲ, ಅನಿಲ್ ಎಮ್ಮಿ, ಚಂದ್ರಗೌಡ ಪಾಟೀಲ, ಕಿರಣ ವಾಲಿಕಾರ, ಬಸವರಾಜ ಸಂಗೋಳ್ಳಿ, ಶಂಕರ ಬಡಿಗೇರ, ಕಿರಣ ವಾಳದ, ಶಿವಕುಮಾರ ವಾಂಗಿ, ಭರತ ಗದಿಗವಾಡ, ರಮೇಶ ಮಡಿವಾಳರ, ರಾಮಚಂದ್ರ ಪತ್ತಾರ, ಬಾಲಚಂದ್ರ ಸಾವಳಗಿಮಠ, ದೊಡ್ಡಗೌಡ ಪಾಟೀಲ, ಮಡಿವಾಳಪ್ಪ ದೊಡ್ಡಮನಿ, ಸುರೇಶ ಕಡತಾಳ, ರುದ್ರಪ್ಪ ಬೆಂಡಿಗೇರಿ, ಅವರಾದಿ ಸಂತೋಷ, ಅದೃಶ್ಯ, ಸೇರಿದಂತೆ ಸಾರ್ವಜನಿಕರಿದ್ದರು.