ದೇವಂತಗಿ ಹಿರೇಮಠದಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ

ಆಳಂದ:ಮಾ.27: ತಾಲೂಕಿನ ದೇವಂತಗಿ ಗ್ರಾಮದ ಹಿರೇಮಠದಲ್ಲಿ ಆದಿ ಜಗದ್ಗುರು ಶ್ರೀರೇಣುಕಾಚಾರ್ಯ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು, ನಂತರ ಮಾತನಾಡಿದ ಹಿರೇಮಠದ ಶ್ರೀಷ.ಬ್ರ.ರೇಣುಕಾ ಶಿವಾಚಾರ್ಯರು ಮನುಕುಲದ ಪರಿವರ್ತನೆ ಶುದ್ದ ಸಮಾಜ ಸಮೂಹ ನಿರ್ಮಾಣದ ಜೊತೆಗೆ ವ್ಯವಸ್ಥಿತ ಬದುಕಿಗೆ ಮುನ್ನುಡಿ ಬರೆದವರು ಆದಿ ಜಗದುರು ಶೀ ರೇಣುಕಾಚಾರ್ಯರು ತತ್ವ ಆಚರಣೆಗಳ ಮೂಲಕ ಸಮಾಜಕ್ಕೆ ಸತ್ಯದ ದಾರಿ ತೋರಿ ಮನುಕುಲದ ಸರ್ವಾಂಗಿಣ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ತಮ್ಮ ಸಂದೇಶಗಳಲ್ಲಿ ಧಾರ್ಮಿಕ ಶೈಕ್ಷಣಿಕ ಆಧ್ಯಾತ್ಮಿಕ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳಿಂದÀ ಮಾನವ ಬದುಕಿಗೆ ಹೊಸ ಮಾರ್ಗ ತೋರಿದ್ದಾರೆ, ವ್ಯಕ್ತಿ ವ್ಯಕ್ತಿತ್ವದೊಂದಿಗೆ ಆತ್ಮಶಕ್ತಿ ವೃದ್ದಿಸಿಕೊಂಡು ಬದುಕಬೇಕು ಸತ್ಯ ಪರಿಶುದ್ದ ಧರ್ಮ ತಳಹದಿಯ ಮೇಲೆ ವಿಶ್ವ ಧರ್ಮವನ್ನು ಸ್ಥಾಪಿಸಲು ಶ್ರಮಿಸಿದ್ದಾರೆ ಅವರು ವಿಚಾರಗಳು ನಮಗೆ ದಾರಿ ದೀಪವಾಗಿವೆ ಎಂದರು, ಗ್ರಾಮದ ಮುಖಂಡರಾದ ರಾಚೋಡಿ ಅಪ್ಪನವರು ಮಹಾಂತಪ್ಪ ಗುಂಡೆರಾವ ಮೂಲಗೆ ದಸ್ತಕರಸಾಬ ನಗರ ದಾನಯ್ಯ ಮಠಪತಿ ರಾಮಚಂದ್ರ ದೊಡಮನಿ ಶಿವಶರಣಪ್ಪ ಕಣ್ಣಿ ಇತರರು ಇದ್ದರು.