ಮಾದನಹಿಪ್ಪರಗಿ:ಜು.25: ಇತ್ತಿಚೆಗೆ ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಒದಗಿಸಬೇಕೆಂದು ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿ/ನಿಯರು ಹಾಗೂ ಗ್ರಾಮಸ್ಥರು ಸೇರಿ ಇಂದು ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯ ಮೇಲೆ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಘೋಷಣೇ ಕೂಗಿದರು. ಕಳೇಜು ವಿದ್ಯಾರ್ಥಿನಿಯರಾದ ಅನಿತಾ ದೇಗಾಂವ್, ಭಾಗ್ಯಶ್ರೀ ತೋಳನೂರ ಮಾತನಾಡಿ, 12 ವರ್ಷಗಳ ಹಿಂದೆ ನಡೆದ ಧರ್ಮಸ್ಥಳದ ಸೌಜನ್ಯ ಕೇಸ್ ವರ್ಷದ ಹಿಂದೆ ನಡೆದ ತಾಲೂಕಿನ ಕೊರಳ್ಳಿ ನಡೆದ ಬಾಲಕಿಯ ಹತ್ಯೆಯಾಗಿರಬಹುದು. ಅಥವಾ ಮಣಿಪುರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಇಂತ ಪ್ರಕರಣಗಳಲ್ಲಿ ಬಾಗಿಗಳಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ಒದಗಿಸಲೇಬೇಕು ಎಂದು ಆಗ್ರಹಿಸಿದರು.
ಸ್ವಾತಿ ಉಡಗಿ, ಭವಾನಿ ಸುತಾರ, ಲಕ್ಷ್ಮೀ ಚೌಡಾಪುರೆ, ಮುಖಂಡರಾದ ಮಲ್ಲಯ್ಯ ಸ್ವಾಮಿ, ಸಿದ್ದರಾಮ ಅರಳಿಮಾರ, ಧರ್ಮಣ್ಣ ಕೌಲಗಿ, ಯುವಕರಾದ ಮಹಿಬೂಬ್ ಫಣಿಬಂದ್, ರಾಹುಲ ಜಿಡ್ಡಿಮನಿ, ಗಣೇಶ ಓನಮಶೆಟ್ಟಿ, ಸಿದ್ದು ತೋಳನೂರ, ಕಲ್ಯಾಣಿ ಭಾವಿಕಟ್ಟಿ, ಶಿವಪುತ್ರ ಬುಕ್ಕಾ ಮಲ್ಲಿಕಾರ್ಜುನ ಏಲಿಕೇರಿ, ಮಲ್ಲಿನಾಥ ಪಟ್ಣೆ ಮುಂತಾದವರು ಭಾಗವಹಿಸಿದ್ದರು.
ನಾಡಕಾರ್ಯಾಲಯದ ಉಪತಸಿಲ್ದಾರ ರವೀಂದ್ರಶೇರಿಕಾರ, ಮನವಿ ಸ್ವೀಕರಿಸಿದರು. ಸ್ಥಳೀಯ ಪೋಲಿಸ್ ಠಾಣೆಯ ಎಎಸೈಗಳಾದ ನಾಗರಾಜ, ಕಮಲು ರಾಠೋಡ ಹಾಗು ಸಿಬ್ಬಂಧಿಗಳು ಇದ್ದರು.