ದೇಣಿಗೆ ಸಂಗ್ರಹ ಬಿಜೆಪಿಗೆ ಅಗ್ರಸ್ಥಾನ

ನವದೆಹಲಿ,ಜ.೧೯- ಚುನಾವಣಾ ದೇಣಿಗೆ ಸಂಗ್ರಹದಲ್ಲಿ ೨೦೨೦-೨೧ರಲ್ಲಿ ೭೫೨ ಕೋಟಿ ರೂ ಸ್ವೀಕರಿಸಿ ಮುಂಚೂಣಿಯಲ್ಲಿದ್ದ ಕೇಂದ್ರದ ಆಡಳಿತಾರೂಡ ಬಿಜೆಪಿ ಪಕ್ಷ ೨೦೨೧-೨೨ರಲ್ಲಿ ಬಿಜೆಪಿ ಶೇ. ೧೫೪ ರಷ್ಟು ಏರಿಕೆಯೊಂದಿಗೆ ೧,೯೧೭ ಕೋಟಿ ರೂ.ಗೆ ಸ್ವೀಕಾರ ಮಾಡಿ ಅಗ್ರ ಸ್ಥಾನದಲ್ಲಿದೆ.
ತೃಣಮೂಲ ಕಾಂಗ್ರೆಸ್ ೨೦೨೧ ರಲ್ಲಿ ೫೪೫.೭ ಕೋಟಿ ಆದಾಯ ಘೋಷಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಲ್ಲಿ ಎರಡನೇ ಸ್ಥಾನ,೨೦೨೧-೨೨ರಲ್ಲಿ ಒಟ್ಟು ರೂ ೫೪೧.೨ ಕೋಟಿ ಸ್ವೀಕೃತಿಯೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.
ಹಿಂದಿನ ವರ್ಷ ರೂ ೨೮೫.೭ ಕೋಟಿ ರೂಪಾಯಿಂದ ಶೇ ೮೯ ರಷ್ಟು ಹೆಚ್ಚಾಗಿದೆ.೨೦೨೧-೨೨ರ ಎಲ್ಲಾ ಎಂಟು ರಾಷ್ಟ್ರೀಯ ಪಕ್ಷಗಳ ವಾರ್ಷಿಕ ಆಡಿಟ್ ವರದಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಚುನಾವಣಾ ದೇಣಿಗೆ ೩,೨೮೯ ಕೋಟಿ ರೂಪಾಯಿ ಹರಿದು ಬಂದಿದೆ. ಪಕ್ಷಗಳ ಒಟ್ಟು ಸ್ವೀಕೃತಿಯಲ್ಲಿ ಬಿಜೆಪಿ ಶೇ.೫೮ ಪಾಲು ಹೊಂದಿದೆ. ತೃಣಮೂಲ ಕಾಂಗ್ರೆಸ್ ಶೇ. ೬೩೩ ರ ಜಿಗಿತವನ್ನು ಕಂಡಿದೆ. ೨೦೨೦-೨೧ ರಲ್ಲಿ ೭೪.೪ ಕೋಟಿ ರೂ.ಗಳಿಂದ ೨೦೨೧-೨೨ ರಲ್ಲಿ ೫೪೫.೭ ಕೋಟಿ ರೂ ದೇಣಿಗೆ ಸ್ವೀಕರಿಸಿದೆ.
ಅನುದಾನಗಳು, ದೇಣಿಗೆಗಳು ಮತ್ತು ಕೊಡುಗೆಗಳಿಂದ ಅದರ ಒಟ್ಟು ಆದಾಯ ಸುಮಾರು ೩೪೮ ಕೋಟಿ ರೂ. ತೋರಿಸಿದೆ, ೨೦೨೦-೨೧ರಲ್ಲಿ ರೂ.೯೫.೪ ಕೋಟಿ. ಕಾಂಗ್ರೆಸ್ ೨೦೨೦-೨೧ರಲ್ಲಿ ಬಾಂಡ್‌ಗಳಿಂದ ಸುಮಾರು ರೂ. ೧೦ ಕೋಟಿ ಆದಾಯ ಘೋಷಿಸಿತ್ತು.ಎನ್‌ಸಿಪಿ, ೨೦೨೧-೨೨ರಲ್ಲಿ ಬಾಂಡ್‌ಗಳ ಮೂಲಕ ೧೪ ಕೋಟಿ ರೂ ಬಂದಿದೆ ಎಂದು ಹೇಳಿದೆ.
೨೦೨೧-೨೨ರಲ್ಲಿ ಸಿಪಿಎಂನ ನಿಧಿ ಒಟ್ಟು ರೂ ೧೬೨.೨ ಕೋಟಿಯಾಗಿದ್ದು, ೨೦೨೦-೨೧ರಲ್ಲಿ ರೂ ೧೭೧ ಕೋಟಿಯಿಂದ ಕಡಿಮೆಯಾಗಿದೆ ಆದರೆ ಎನ್‌ಸಿಪಿಯ ಸ್ವೀಕೃತಿಗಳು ೨೦೨೦-೨ ರಲ್ಲಿ ರೂ ೩೪.೯ ಕೋಟಿಯಿಂದ ರೂ ೭೫.೮ ಕೋಟಿಗೆ ದ್ವಿಗುಣಗೊಂಡಿದೆ.
ಬಿಎಸ್‌ಪಿಯ ಸ್ವೀಕೃತಿಗಳು ರೂ.೫೨.೪ ಕೋಟಿಯಿಂದ ರೂ.೪೩.೭ ಕೋಟಿಗೆ ಇಳಿಕೆಯಾಗಿದ್ದು, ಸಿಪಿಐ ರೂ.೨.೧ ಕೋಟಿಯಿಂದ ರೂ.೨.೮ ಕೋಟಿಗೆ ಏರಿಕೆಯಾಗಿದೆ;

ಪಕ್ಷಗಳ ಖರ್ಚು
ವೆಚ್ಚದ ವಿಷಯಕ್ಕ ಬಂದರೆ ೨೦೨೧-೨೨ರಲ್ಲಿ ಬಿಜೆಪಿ ಒಟ್ಟು ಖರ್ಚು ೮೫೪.೪೬ ಕೋಟಿ ಎಂದು ಘೋಷಿಸುವ ಮೂಲಕ ಇತರೆ ಪಕ್ಷಗಳನ್ನು ಹಿಂದಿಕ್ಕಿದೆ
ಕಾಂಗ್ರೆಸ್ ೪೦೦ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ. ವರ್ಷಕ್ಕೆ ತೃಣಮೂಲ ವೆಚ್ಚ ೨೬೮.೩ ಕೋಟಿ ರೂ., ಬಿಎಸ್‌ಪಿ ೮೫.೧ ಕೋಟಿ ರೂ. ಸಿಪಿಎಂನ ೮೩.೪೧ ಕೋಟಿ ರೂ., ಸಿಪಿಐನ ಸುಮಾರು ೧.೨ ಕೋಟಿ ರೂ., ಎನ್‌ಸಿಪಿಯ ೩೨.೨ ಕೋಟಿ ರೂ. ಮತ್ತು ಎನ್‌ಪಿಪಿಯ ೩೯ ಲಕ್ಷ ರೂ ಖರ್ಚು ಮಾಡಲಾಗಿದೆ.