ದೇಗಾವದಲ್ಲಿ ಸಂಭ್ರದಮ ಹೋಳಿ


ಚನ್ನಮ್ಮನ ಕಿತ್ತೂರ,ಮಾ.6:ಬೆಳಗಾವಿ ಜಿಲ್ಲೆ ಕಿತ್ತೂರ್ ತಾಲೂಕಿನ ದೇಗಾವದಲ್ಲಿ ಮಾರ್ಚ್ 7ರಿಂದ 9ರವರೆಗೆ ಜರಗಲಿರುವ ಹೋಳಿ ಕಾಮನನ ಜಾತ್ರೆಗೆ ಭಕ್ತರು ತಂಡೋಪ ತಂಡವಾಗಿ ಆಗಮಿಸುವರು ಸರತಿ ಸಾಲಿನಲ್ಲಿ ಬಂದು ಭಕ್ತರು ದರ್ಶನ ಪಡೆಯುವರು.
ಹೋಳಿ ಹಬ್ಬವೆಂದರೆ ಎಲ್ಲರ ಕಣ್ಮುಂದೆ ಬರುವುದು ಬಣ್ಣದ ಆಟ ದೇವಗಾoವ ಶಿರಾಗಪುರ ಹೊಸೂರ ಲಿಂಗದಳ್ಳಿ ಗ್ರಾಮಗಳ ಶಿರಗಾಪುರ ಬಣ್ಣವಿಲ್ಲದೆ ಹೋಳಿ ಹಬ್ಬ ಜಾತ್ರೆ ಮಾಡುವುದು ನೂರಾರು ವರ್ಷಗಳಿಂದ ಸಡಗರ ಸಂಭ್ರಮಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಕಿತ್ತೂರು ಕರ್ನಾಟಕದಲ್ಲಿ ಇಂತಹ ಹೋಳಿ ಹಬ್ಬ ದೇವಗಾoವ ಶಿರಗಾಪುರ ಕಾಮಣ್ಣನ ಜಾತ್ರೆಯಾಗಿ ಆಚರಿಸುತ್ತಾರೆ. ಜಾತ್ರೆ ಬಂತು ಅಂದರೆ ಊರಿನ ಜನತೆ ಮನೆ ಧೂಳು ಜಾಡಿಸಿ ಬಣ್ಣ ಸುಣ್ಣಗಳಿಂದ ಮನೆ ಸಿಂಗರಿಸುತ್ತಾರೆ ಮನೆಗೆ ಬೀಗರು ಬರುತ್ತಾರೆಂದು ತರಹದ ಅಡುಗೆ ಮಾಡಿ ಅಂದರೆ ಹೋಳಿಗೆ ಕರ್ಚಿಕಾಯಿ ವಡೆ ಶಾವಿಗೆ ಇನ್ನೂ ಹಲವಾರು ಹರಿದಿನಸ ಮಾಡಿ ಉಣಬಡಿಸುತ್ತಾರೆ.
ಕಾಮಣ್ಣನ ಭಾರಿ ಗಾತ್ರದ ಪ್ರತಿ ಕೃತಿ ಮಾಡಿ ಮೂರು ದಿನ ಜಾತ್ರೆಯನ್ನು ಹಮ್ಮಿಕೊಂಡಿರುತ್ತಾರೆ. ಈ ಹಬ್ಬದಲ್ಲಿ ಒಬ್ಬರಿಗೊಬ್ಬರು ಬಣ್ಣ ಎರಚುವುದು ಕಾಣುವುದಿಲ್ಲ. ಅದರ ಬದಲಿಗೆ ಹೊಸ ಬಟ್ಟೆ ಧರಿಸಿ ಮೂರು ದಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು ಸೇರಿ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿ ಜಾತ್ರೆ ಮಾಡುತ್ತಾರೆ.