ದೇಗಾಂವದಲ್ಲಿ ಬೀಟ್ ಸಭೆ

ಚನ್ನಮ್ಮ ಕಿತ್ತೂರ, ಜೂ1: ಕಿತ್ತೂರ ಪೋಲಿಸ್ ಠಾಣೆ ಒಳಗೊಂಡ ದೇಗಾಂವದಲ್ಲಿ ಪೋಲಿಸ್ ಬೀಟ್ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಸಿಪಿಆಯ್ ನಿತ್ಯಾನಂದ ಪಂಡಿತ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಬೀಟ್ ಸಭೆ ಕೈಗೊಂಡ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತಿಳಿವಳಿಕೆ ನೀಡಲಾಯಿತು. ಹಾಗೂ ಗ್ರಾಮ ಮಟ್ಟದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಹಾಗೂ ರೌಡಿ ಜನರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವುದು ಅಲ್ಲದೇ ಸಾರ್ವಜನಿಕರು ಕಾನೂನು ಕೈಯೆತ್ತಿಕೊಳ್ಳದೇ ಪೋಲಿಸರೊಂದಿಗೆ ಉತ್ತಮ ಬಾಂಧವ್ಯ ಬೆಳಿಸಿಕೊಂಡು ಪೋಲಿಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಲು ತಿಳಿಸಲಾಯಿತು.
ಇತ್ತಿಚ್ಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹಾಗೂ ಮೋಸ ಹೋಗದಂತೆ ಕಾನೂನು ತಿಳುವಳಿಕೆ ನೀಡಲಾಯಿತು.
ಈ ವೇಳೆ ಗ್ರಾ.ಪಂ ಸದಸ್ಯರುಗಳಾದ ಮಹಾಂತೇಶ ದುಗ್ಗಾಣಿ, ಮೌನೇಶ ಬಡಿಗೇರ, ಎಲ್ಲಪ್ಪ ಅಗಸರ, ಭರತ ಗಂದಿಗವಾಡ, ಹಿರಿಯರಾದ ಮುತ್ತುಗೌಡ ಪಾಟೀಲ, ಕಲ್ಲಪ್ಪ ಅಕ್ಮೋಜಿ, ಪ್ರಭಾರಿ ಪಿಎಸ್‍ಆಯ್ ನಂದೀಶ, ಎಎಸ್‍ಆಯ್ ಎ ಆರ್ ಭಾವನ್ನವರ, ಸೇರಿದಂತೆ ಗ್ರಾ.ಪಂ. ಸಿಬ್ಬಂದಿ, ಗ್ರಾಮಸ್ಥರಿದ್ದರು.