ದೇಗಲಮಡಿ: ಕೆಸರು ಗದೆಯಾದ ರಸ್ತೆ

ಚಿಂಚೋಳಿ,ಜು.31- ತಾಲೂಕಿನ ದೇಗಲಮಡಿ ಗ್ರಾಮದ ರಸ್ತೆ ಕೆಸರು ಗದ್ದೆಯಾಗಿದ್ದು, ಈ ಮಾರ್ಗದ ಸಂಚಾರ ನರಕ ಯಾತನೆಯಾಗಿದೆ ಕೂಡಲೇ ಈ ರಸ್ತೆ ದುರಸ್ಥಿಗೊಳಿಸುವಂತೆ ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಹುಲ್ ಯಾಕಾಪೂರ, ಅವರು ಆಗ್ರಹಿಸಿದರೆ.
ನಡೆದಾಡುವ ದೇವರೆಂದು ಪ್ರಸಿದ್ದಿ ಪಡೆದಿರುವ ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತರ, ಅವರ ಮಠಕ್ಕೆ ಹೋಗುವ ರಸ್ತೆಯು ಕೆಸರು ಗದ್ದೆಯಂತೆ ಮಾರ್ಪಟ್ಟಿದ್ದು, ಸಂಪೂರ್ಣ ಹಾಳಾಗಿದೆ, ಇದರಿಂದ ಈ ಮಠಕ್ಕೆ ಬರುವ ಮಹಾರಾಷ್ಟ್ರ ಆಂಧ್ರ ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಜಿಲ್ಲೆಯ ಭಕ್ತಾದಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶ್ರೀಗಳ ಮಠಕ್ಕೆ ಹೋಗುವ ರಸ್ತೆ ನಿರ್ಮಾಣ ಮಾಡಬೇಕೆಂದು ಅವರು ಆಗ್ರಹಿಸಿದರೆ.