ದೆಹಲಿ ಹೈಕೋರ್ಟ್ ನೋಟೀಸ್ ಸುಪ್ರೀಂ ಮೆಟ್ಟಿಲೇರಿದ ಕೇಂದ್ರ


ನವದೆಹಲಿ,ಮೇ.೫- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕ್ಸಿಜೆನ್ ಕೊರತೆ ಎದುರಾಗಿರುವ ಸಂಬಂಧ ಶೋಕಾಸ್ ನೋಟೀಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್ ಕ್ರಮದ ವಿರುದ್ದ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಇದರಿಂದ ಕೊರೊನಾ ರೋಗಿಗಳು ಸಾವನ್ನಪ್ಪುತ್ತಿದ್ದಾರೆ.ಆಮ್ಲಜನಕ ಕೊರತೆ ಎದುರಾಗಿದ್ದರೂ ಯಾಕೆ ಸುಮ್ಮನಿದ್ದೀರಾ ನಿಮ್ಮ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಶೋಕಾಸ್ ನೋಟೀಸ್ ಅನ್ನು ದೆಹಲಿ ಹೈಕೋರ್ಟ್ ಮೊನ್ನೆ ಕೇಂದ್ರ ಸರ್ಕಾರಕ್ಕೆ ಜಾರಿ ಮಾಡಿತ್ತು.
ದೆಹಲಿ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್,ವಿ ರಮಣ ನೇತೃತ್ವದ ನ್ಯಾಯಪೀಠ,ವಿಶೇಷ ಪೀಠ ಸ್ವಯಂ ಪೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಇಂದೇ ವಿಚಾರಣೆ ನಡೆಯಬೇಕಾದರೆ ವಿಶೇಷ ಪೀಠ ರಚನೆ ಮಾಡಬೇಕಾಗುತ್ತದೆ ಎಂದು ಸಾಲಿಸಿಟರ್ ಜನರಲ್ ಅವರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರಿದ್ದ ಪೀಠ ಸೂಚನೆ ನೀಡಿದೆ.
ದೆಹಲಿಯಲ್ಲಿ ಆಮ್ಲಜನಕ ಕೊರೆತೆ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಸಹಾಕಾರ ಸರಿಯಲ್ಲ. ಸಂಕಷ್ಟದ ಸಮಯಲ್ಲಿ ಆಕ್ಸಿಜನೆ ನೀಡುವುದು ನಿಮ್ಮ ಕರ್ತವ್ಯ ಈ ಸಂಬಂಧ ಅಗತ್ಯವಿರು ೭೦೦ ಮೆಟ್ರಿಕ್ ಟನ್ ಆಕ್ಸಿಜೆನ್ ಒದಗಿಸಿ ಇಲ್ಲವೆ ನಿಮ್ಮ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಕೈಗೆತ್ತೊಕೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿತ್ತು.
ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ದೆಹಲಿಗೆ ಅಗತ್ಯವಿರುವ ಆಕ್ಸಿಜೆನ್ ಒದಗಿಸಿ ಈ ಸಂಬಂಧ ನಾಳೆ ಪ್ರಮಾಣ ಪತ್ರ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.