
ನವದೆಹಲಿ,ಮಾ.15- ದೆಹಲಿ ಸರ್ಕಾರ ‘ಹಳೆಯ ಅಬಕಾರಿ ನೀತಿ’ಯನ್ನು 6 ತಿಂಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಮುಂಬರುವ ಆರು ತಿಂಗಳಿಗೆ ಐದು ರಜಾ ದಿನಗಳನ್ನು ಸಹ ಉಲ್ಲೇಖಿಸಿ ಮದ್ಯನೀತಿ ವಿಸ್ತರಿಸಿದೆ ಹೊಸ ನೀತಿ ಬರುವ ತನಕ ಹಳೆ ನೀತಿ ಮುಂದುವರಿಯಲಿದೆ.
‘ಹಳೆಯ ಅಬಕಾರಿ ನೀತಿ’ಯನ್ನು ಆರು ತಿಂಗಳವರೆಗೆ ವಿಸ್ತರಿಸಿದೆ. ವಿಸ್ತರಣೆಯೊಂದಿಗೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸಲು ತನ್ನ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.
ಹಳೆಯ ಅಬಕಾರಿ ನೀತಿಯ ಪ್ರಕಾರ, ಈ ಆರು ತಿಂಗಳಲ್ಲಿ ಐದು ರಜಾ ದಿನಗಳು ಇರುತ್ತವೆ, ಅದು ಮಹಾವೀರ ಜಯಂತಿ, ಶುಭ ಶುಕ್ರವಾರ, ಬುದ್ಧ ಪೂರ್ಣಿಮಾ, ಈದ್-ಅಲ್-ಫಿತರ್ ಮತ್ತು ಈದ್-ಅಲ್-ಅಧಾ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಮದ್ಯನೀತಿ ಅನುಷ್ಟಾನದ ವಿಷಯ ದೆಹಲಿ ಸರ್ಕಾರದ ಬುಡ ಅಲ್ಲಾಡಿಸಿದ್ದು ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೊಡಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ಹಲವು ಮಂದಿಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿ ವಿಚಾರಣೆ ನಡೆಸುತ್ತಿದೆ