ದೆಹಲಿ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಒಕ್ಕೂಟದ ಕಲಾತಂಡಗಳು

ಬೀದರ:ಫೆ.28:ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಅಂಗವಾಗಿ ನವದೆಹಲಿಯ ತಾಲ್ಕೋಟರ್ ಸಭಾಂಗಣದಲ್ಲಿ ಫೆಬ್ರುವರಿ 25 ಮತ್ತು 26ರಂದು ನಡೆದ ಅಮೃತ ಮಹೋತ್ಸವ ಸಂಭ್ರಮಾಚರಣೆ ಹಾಗೂ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಒಟ್ಟು 20 ಕಲಾತಂಡಗಳು ಪ್ರದರ್ಶನ ನೀಡಿ ದೆಹಲಿ ಕನ್ನಡಿಗರ ಗಮನ ಸೆಳೆದವು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಸ್ವಾಗತ ಸಮಾರಂಭದಲ್ಲಿ ಮೆರವಣಿಗೆಯ ಕಲಾತಂಡಗಳಾದ ,ಬೀದರನ ಬಾಲರಾಜ್ ಮತ್ತು ತಂಡದ ಹಲಗೆವಾದನ, ಕಲ್ಬುರ್ಗಿಯ ಶ್ರೀಮತಿ ಲಲಿತಾ ಲೋಕೋ ಪವರ್ ತಂಡದ ಲಂಬಾಣಿ ನೃತ್ಯ, ಯಾದಗಿರಿ ಜಿಲ್ಲೆಯ ಹನುಮಂತರಾಯ ದೆವತ್ಕಲ್ ಹಾಗೂ ಬೀರಲಿಂಗ ತಂಡದ ಡೊಳ್ಳು ಕುಣಿತ. ರಾಯಚೂರು ಜಿಲ್ಲೆಯ ವೆಂಕಟೇಶ್ ಕೋಟ್ನೆಕಲ್ ತಂಡದ ಹಲಗೆ ವಾದನ, ಜಂಬಣ್ಣ ಹಸಮಕಲ್ ತಂಡದ ಹಗಲುವೇಶ, ಕೊಪ್ಪಳ ಜಿಲ್ಲೆಯ ಶರಣಯ್ಯ ಗೊರಲೆಕೊಪ್ಪ ತಂಡದ ಕರಡಿಮಜಲು, ಬಳ್ಳಾರಿಯ ಶಿವಕುಮಾರ್ ತಂಡದ ಗೊರವ ಕುಣಿತ, ವಿಜಯನಗರ ಜಿಲ್ಲೆಯ ಭದ್ರಪ್ಪ ತಂಡದ ನಂದಿ ಕೋಲು, ಗುಂಡಿ ರಮೇಶ್ ತಂಡದ ಹಲಗೆ ವಾದನ, ತಂಡಗಳು ಪ್ರಧಾನಮಂತ್ರಿಗಳ ಮೆರವಣಿಗೆಯಲ್ಲಿ ಗಮನ ಸೆಳೆಸದವು,ನಂತರ ಸಮಾರೂಪ ಸಮಾರಂಭದಲ್ಲಿ ನಡೆದ ಜಾನಪದ ಗಾಯನ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಗುತ್ತೇದಾರ್ ತಂಡದ ದುಂದುಮೆ ಹಾಡು, ಬೀದರ್ ಮುದುಕರ ಗೊಡಕೆ ಕೊಹಿನೂರ್ ವಾಡಿ ತಂಡದ ಜಾನಪದ ಗೀತೆ ,ಮಹೇಶ ಬೀದರ್ ತಂಡದ ಭಾವಗೀತೆ, ತಿಂದಪ್ಪ ಕೂಡ್ಲಿಗಿ ಮತ್ತು ತಂಡದ ಶಾಸ್ತ್ರೀಯ ಸಂಗೀತ ,ನರೇಂದ್ರ ಗೊರವಪ್ಪನವರು ಮತ್ತು ತಂಡದ ಸಮೊಹ ಗಾಯನ, ಯಮನಪ್ಪ ಕವಳಿ ರಾಯಚೂರು ತಂಡದ ಡೊಳ್ಳಿನ ಪದ, ವೀರೇಶ್ ನಾಯಕ್ ಸಂಘಟಿಕರ ತತ್ವಪದ ಗಾಯನ ಜಂಬಣ್ಣ ಅಸಮಕಲ್ ತಂಡದ ಹಗಲು ವೇಶ, ನರಸಣ್ಣ ದಿನ್ನಿ ಸಂಗಡಿಗರ ಭಜನಾ ಪದ ಗಾಯನ ,ಮಲ್ಲಪ್ಪ ಪೂಜಾರಿ ಮಸ್ಕಿ ಮತ್ತು ತಂಡದ ಭಜನಾ ಪದ ,ಈ ಕಾರ್ಯಕ್ರಮಗಳು ಸಮಾರಂಭದ ಜನಮನ ಸಂಭ್ರಮಿಸಿದವು, ಈ ಸಂದರ್ಭದಲ್ಲಿ ದೆಹಲಿ ಕನ್ನಡಿಗರ ಸಂಘದ ಅಧ್ಯಕ್ಷ ಸಿಎಂ ನಾಗರಾಜ್ ಮಾತನಾಡಿ ಕಲ್ಯಾಣ ಕರ್ನಾಟಕದ 250 ಕ್ಕೂ ಹೆಚ್ಚು ಜನ ಕಲಾವಿದರು ಭಾಗವಹಿಸಿ ಪೆÇ್ರೀತ್ಸಾಹಿಸಿದ್ದಾರೆ ಎಂದು ಒಕ್ಕೂಟದ ಕಾರ್ಯ ಶ್ಲಾಘಿಸಿದರು, ಈ ಸಂದರ್ಭದಲ್ಲಿ ಗಡಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ರಂಗ ನಿರ್ದೇಶಕ ಟಿ ಎಸ್ ನಾಗಭರಣ ಹಾಗೂ ಕಲ್ಯಾಣ ಕರ್ನಾಟಕ ಕಲಾವಿದ ಒಕ್ಕೂಟದ ಅಧ್ಯಕ್ಷ ವಿಜಯ ಕುಮಾರ ಸೋನಾರೆ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನಳ್ಳಿ ಪದಾಧಿಕಾರಿಗಳಾದ ಲಲಿತ ಪವಾರ್, ನಾರಾಯಣಪ್ಪ ಮಾಡಸಿರವಾರ, ಶಿವಕುಮಾರ್ ಪಣಿಂದ್ರಪ್ರಸಾದ್, ಮಲ್ಲು ಬಾದ್ಯಾಪೂರ್, ಸಿದ್ದನಗೌಡ ಹೆಬ್ಬಾಳ ಕಾಶೀನಾಥ್ ಮುಂದೆವಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು