ದೆಹಲಿ ವೈಭವ ಜಗತ್ತಿನಲ್ಲೆಡೆ ಪಸರಿಸಲಿ


ನವದೆಹಲಿ, ಡಿ. ೨೮. ಜಾಗತಿಕವಾಗಿ ಪ್ರಬಲವಾಗಿರುವ ಆರ್ಥಿಕ ಹಾಗೂ ವ್ಯೂಹಾತ್ಮಕ ಶಕ್ತಿ ಹೊಂದಿರುವ ೧೩೦ ಕೋಟಿ ಜನಸಂಖ್ಯೆಯಳ್ಳ ಭಾರತದ ರಾಜಧಾನಿಯಾಗಿರುವ ದೆಹಲಿ ತನ್ನ ವೈಭವವನ್ನು ವಿಶ್ವದಲ್ಲೆಡೆ ಪ್ರತಿಬಿಂಬಿಸುವಂತಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿಲ್ಲಿ ಹೇಳಿದ್ದಾರೆ.
ದೆಹಲಿಯ ಮೆಟ್ರೋ ರೈಲಿನ ಕೆನ್ನೇರಳೆ ಮಾರ್ಗದಲ್ಲಿ ಭಾರತದ ಮೊದಲ ಚಾಲಕರಹಿತ ರೈಲು ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೆಹಲಿ ಜನರ ಬದುಕು ಮತ್ತಷ್ಟು ಉತ್ತಮವಾಗಿಸಲು ಹಾಗೂ ನಗರವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.
ಜಾಗತಿಕವಾಗಿ ಪ್ರಬಲವಾಗಿರುವ ಆರ್ಥಿಕ ಮತ್ತು ವ್ಯೂಹಾತ್ಮಕ ಶಕ್ತಿ ಹೊಂದಿರುವ ಭಾರತದ ೧೩೦ ಕೋಟಿ ಜನರು ರಾಜಧಾನಿಯಾಗಿರುವ ದೆಹಲಿಯ ವೈಭವವನ್ನು ಜಗತ್ತಿನ ಮೇಲೆ ಪ್ರತಿಬಿಂಬಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ.ದೆಹಲಿ ನಿವಾಸಿಗಳ ಬದುಕು ಮತ್ತಷ್ಟು ಉತ್ತಮವಾಗಿಸಲು ಹಾಗೂ ನಗರವನ್ನು ಅತ್ಯಾಧುನಿಕ ಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.
೨೦೨೫ರ ವೇಳೆಗೆ ದೇಶದ ೨೫ಕ್ಕೂ ಹೆಚ್ಚು ನಗರ ಗಳಿಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನದಿಂದಾಗಿ ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸೇವೆ ಆರಂಭವಾಯಿತು. ೨೦೧೪ರಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಕೇವಲ ಐದು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಜಾರಿಯಲ್ಲಿತ್ತು. ಇಂದು ೧೮ ನಗರಗಳಲ್ಲಿ ಮೆಟ್ರೋ ರೈಲು ಸೇವೆ ಲಭ್ಯವಾಗುತ್ತಿದೆ ಎಂದು ಅವರು ತಿಳಿಸಿದರು.
೨೦೨೫ರ ವೇಳೆಗೆ ೨೫ ನಗರಗಳಿಗೂ ಹೆಚ್ಚಿನ ನಗರಗಳಿಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗುವುದು. ಮೇಕ್ ಇನ್ ಇಂಡಿಯಾ ಆಂದೋಲನ ಮೆಟ್ರೋ ಸೇವೆಗಳ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಆಂದೋಲನದ ಮೂಲಕ ನಿರ್ಮಾಣ ವೆಚ್ಚಕಡಿಮೆಯಾಗಲಿದೆಎಂದು ಅವರು ತಿಳಿಸಿದರು.
ವಿದೇಶಿ ಹಣ ಬಳಕೆ ಕಡಿಮೆಯಾಗುವುದರ ಜೊತೆಗೆ ದೇಶವಾಸಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿದೆ ಎಂದರು.
ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡುವುದರಿಂದ ಆಧುನಿಕ ಸಾರಿಗೆ ವ್ಯವಸ್ಥೆ ಯನ್ನು ಜನರಿಗೆ ಕಲ್ಪಿಸಿದಂತಾಗುತ್ತದೆ ಮತ್ತು ವೃತ್ತಿಪರರ ಜೀವನಶೈಲಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ . ಇದೇ ಕಾರಣಕ್ಕಾಗಿ ಮೆಟ್ರೋ ರೈಲ್ವೆ ಸೇವೆಯನ್ನು ವಿವಿಧ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದಲ್ಲಿಂದು ೪ ಕಡೆ ಬೋಗಿಗಳನ್ನು ತಯಾರುಮಾಡುವ ಬೃಹತ್ ಕಂಪನಿಗಳು ಕಾರ್ಯನಿರತವಾಗಿವೆ. ಬಿಡಿಭಾಗಗಳನ್ನು ತಯಾರಿಸುವ ಹತ್ತು ಹಲವು ಕಂಪನಿಗಳು ತಲೆಯೆತ್ತಿವೆ. ಇದು ಮೇಕ್ ಇನ್ ಇಂಡಿಯಾ ಆಂದೋಲನಕ್ಕೆ ಸಹಕಾರಿಯಾಗಲಿದೆ ಅಲ್ಲದೆ ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ನೆರವಾಗಲಿದೆ ಎಂದು ಪ್ರಧಾನಿ ಹೇಳಿದರು.