ದೆಹಲಿ ವರಿಷ್ಠರ ಭೇಟಿಯಲ್ಲಿ ಶ್ರೀರಾಮುಲುರೆಡ್ಡಿ ಘರ್ ವಾಪ್ಸಿಗೆ ಅನುಮತಿಗೆ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜ,30-  ಮಾಜಿ ಸಚಿವ ಬಿ. ಶ್ರೀರಾಮುಲು  ಬಿಜೆಪಿ ದೆಹಲಿ ವರಿಷ್ಠರ ಭೇಟಿ ನಡೆಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ನಿನ್ನೆ ರಾತ್ರಿ   ನವದೆಹಲಿಯಲ್ಲಿ  ಭೇಟಿಯಾಗಿ ಪಕ್ಷ ಸಂಘಟನೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರಂತೆ.
ಈ ಕುರಿತು ಸಂಜೆವಾಣಿ ಜೊತೆ ಮಾತನಾಡಿದ ಶ್ರೀರಾಮುಲು ಅವರು.  ಕರ್ನಾಟಕದಲ್ಲಿ ಪಕ್ಷದ ಸಂಘಟನೆ ಕುರಿತಾಗಿ ನೀಡಿರುವ ಸಲಹೆಗಳನ್ನು ಅಳವಡಿಸಿಕೊಂಡು ಮುನ್ನಡೆಯಲು ಸೂಚಿಸಿದ್ದಾರೆ.  ಇಂದು ಗೃಹ ಸಚಿವ ಅಮಿತ್ ಷಾ ಅವರನ್ನು  ಭೇಟಿ ಮಾಡಿದ್ದು, ಅವರ ಬಳಿಯೂ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಿದೆ. ಜೊತೆಗೆ ಸ್ನೇಹಿತ  ಜನಾರ್ಧನರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮನವಿಯನ್ನು ಇರಿಸಿದೆ. ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಆದರೆ ಈ ಕುರಿತು ನಂತರ ಮಾತಾಡೋಣ ಎಂದಿದ್ದಾರಂತೆ.
ಈ ಹಿಂದೆ ಷಾ ಅವರು ಅದನ್ನು ಪ್ರಸ್ತಾಪಿಸಬೇಡಿ ಎಂದಿದ್ದರು. ಆದರೆ ಒಂದು ಈಗ ಆಯ್ತು ಚರ್ಚೆ ಮಾಡೊಣ ಎಂದಿರುವುದು ರೆಡ್ಡಿ ಅವರನ್ನು ಕರೆತರುವ ಬಗ್ಗೆ ಪಕ್ಷ ಮೃದು ಧೋರಣೆ ತಳೆದಂತೆ ಕಾಣುತ್ತಿದೆ.