ದೆಹಲಿ ಲೌಕ್‌ಡೌನ್ ಮೆಟ್ರೋ ಸೇವೆ ಆಭಾದಿತ

ನವದೆಹಲಿ, ಏ. ೨೧: ದೆಹಲಿ ಮೆಟ್ರೋ ರೈಲು ನಿಗಮ, ಲೌಕ್ ಡೌನ್ ನಡುವೆಯೂ ಪ್ರತಿ ೧೫ ನಿಮಿಷಗಳಿಗೊಮ್ಮೆ ಮೆಟ್ರೋ ರೈಲು ಸೇವೆಯನ್ನು ಬಳಕೆದಾರರಿಗೆ ದೊರಕಿಸಿದೆ.
ನಗರದ ೨೦ಕ್ಕೂ ಹೆಚ್ಚು ಮೆಟ್ರೋ ರೈಲು ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಮೆಟ್ರೋ ಬಳಕೆದಾರರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ನಿಗಮ ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡವರು ಹಾಗೂ ಇ-ಪಾಸ್ ಹೊಂದಿರುವವರಿಗೆ ಪ್ರಯಾಣಕ್ಕೆ ಅನುವಾಗಿದೆ.
ಕೆಲ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬೆಳಿಗ್ಗೆ ೬-೩೦ರಿಂದ ಕಾರ್ಯಾಚರಣೆ ನಡೆಸಲು ತಾತ್ಕಾಲಿಕವಾಗಿ ನಿರಾಕರಿಸಿದೆ. ನವದೆಹಲಿ, ದ್ವಾರಕಾ ಮೋರ್, ಆರ್ ಕೆ ಆಶ್ರಮ, ರಾಜೀವ್ ಚೌಕ್ ಮತ್ತು ಇತರ ನಿಲ್ದಾಣಗಳಲ್ಲಿ ಬೆಳಗ್ಗೆ ಪ್ರವೇಶವನ್ನು ನಿಲ್ಲಿಸಲಾಗಿದೆ. ಬೆಳಿಗ್ಗೆ ೧೦ ಗಂಟೆಯ ವೇಳೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಲಾಕ್ ಡೌನ್ ಹೊರತಾಗಿಯೂ, ಅನೇಕ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ರೈಲುಗಳು ಗರಿಷ್ಠ ಸಮಯದಲ್ಲಿ ಪ್ರತಿ ೩೦ ನಿಮಿಷಗಳಿಗೊಮ್ಮೆ (ಬೆಳಿಗ್ಗೆ ೮ ರಿಂದ ೧೦ ಮತ್ತು ಸಂಜೆ ೫ ರಿಂದ ಸಂಜೆ ೭ ರವರೆಗೆ) ಸಂಚಾರ ನಡೆಸಲಿವೆ.
ಪ್ರಮುಖವಾಗಿ ಚಾಂದಿನಿ ಚೌಕ್, ಕಾಶ್ಮೇರ್ ಗೇಟ್, ರಾಜೀವ್ ಚೌಕ್, ಝಾಂಡೆವಾಲನ್, ಕರ್ಕರ್ದೂಮಾ, ಪ್ರೀತ್ ವಿಹಾರ್, ನಿರ್ಮಾಣ್ ವಿಹಾರ್, ಸುಪ್ರೀಂ ಕೋರ್ಟ್, ಆನಂದ್ ವಿಹಾರ್, ಐಎಸ್ ಬಿಟಿ ವೈಶಾಲಿ ಮತ್ತು ಶಾದಿಪುರ್ ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ದಯಾಳ್ ತಿಳಿಸಿದ್ದಾರೆ.