ದೆಹಲಿ ರೈತ ಹೋರಾಟಕ್ಕೆ 150 ದಿನ

ಧಾರವಾಡ ಎ.30-ರೈತ ಕೃಷಿಕಾರ್ಮಿಕರ ಸಂಘಟನೆ ಆರ್ ಕೆ ಎಸ್ (ಎಐಕೆಕೆಎಂಎಸ್) ವತಿಯಿಂದ ಧಾರವಾಡದ ಜಿಲ್ಲೆಯ ರೈತರು ದೆಹಲಿಯ ರೈತ ಹೋರಾಟಕ್ಕೆ 150 ದಿನ ತುಂಬಿದ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚ ಕರೆ ನೀಡಿದ್ದ ಅಖಿಲ ಭಾರತ ಸಂಘರ್ಷ ಸಂಕಲ್ಪ ದಿನದ ಅಂಗವಾಗಿ ಧಾರವಾಡದಲ್ಲಿ ಆನ್ ಲೈನ್ ಪ್ರತಿಭಟನೆ ಮುಖಾಂತರ ಸಂಘರ್ಷ ಸಂಕಲ್ಪ ದಿನವನ್ನು ಆಚರಿಸಿದರು.

         ಸಂಕಲ್ಪ ದಿನದ ಅಂಗವಾಗಿ ರೈತರು ಪ್ರಮುಖವಾಗಿ ಕರಾಳ ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯಬೇಕೆಂದು ಮತ್ತು ಕರೋನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾದ ಜನತೆಗೆ ಉಚಿತವಾಗಿ ಬೆಡ್, ಆಕ್ಸಿಜನ್ , ವ್ಯಾಕ್ಸಿನ್ ನೀಡುವಂತೆ , ದೇಶದ ಆರೋಗ್ಯ ವ್ಯವಸ್ಥಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿ , ಅಖಿಲ ಭಾರತ ಸಂಘರ್ಷ ಸಂಕಲ್ಪ ದಿನವನ್ನು ಆಚರಿಸಲಾಯಿತು.ಧಾರವಾಡದಲ್ಲಿಯ ಸಹಿತ ಸಂಕಲ್ಪ ದಿನದ ಅಂಗವಾಗಿ ರೈತರು ತಮ್ಮ ಮನೆ, ಹೊಲಗಳಿಂದ ಮತ್ತು ನರೇಗಾ ಕೆಲಸ ಮಾಡುವ ಸ್ಥಳಗಳಿಂದ ಆನ್ ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಕಾಯ್ದೆಗಳು ವಾಪಸ್ ಪಡೆಯುವರೆಗೂ ಹೋರಾಟ ಮುಂದುವರೆಸುವದಾಗಿ ಸಂಕಲ್ಪ ಮಾಡಿದ್ದರು.

          ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ,ಹನುಮೇಶ ಹುಡೇದ, ಮಂಜುನಾಥ ಜೋಡಳ್ಳಿ, ಮಾರುತಿ ಪೂಜಾರ, ರುದ್ರಪ್ಪ ಜೋಗಿ,ಜಗದೀಶ ಪೂಜಾರ ,ದೀಪಾ, ರಾಮು ಪುಂಡಲೀಕ, ಗೋವಿಂದ ಕೃಷ್ಣಪ್ಪನವರ್,  ಮುಂತಾದವರು ಇದ್ದರು.