ದೆಹಲಿ ರೈತರ ಹೋರಾಟಕ್ಕೆ ಸಿಐಟಿಯು ಬೆಂಬಲಿಸಿ ಪ್ರತಿಭಟನೆ

ಲಿಂಗಸುಗೂರು.ಜ.೯-ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿದ್ಯುತ್ ಮಸೊದೆಯನ್ನು ಹಿಂಪಡೆಯವಂತೆ ರೈತರ ಹೋರಾಟಕ್ಕೆ ತಾಲೂಕ ಸಿಐಟಿಯು ಕಾರ್ಯಕರ್ತರು ಗುರು ಭವನದಿಂದ ಸಹಾಯಕ ಆಯುಕ್ತರ ಕಛೇರಿಯವರೆಗೆ ಪ್ರತಿಭಟನಾ ರ್‍ಯಾಲಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕೇಂದ್ರ ಹಾಗೂ ರಾಜ್ಯ ಸರರ್ಕಾರಗಳ ವಿರುದ್ದ ಘೋಷಣೆಯನ್ನು ಕೂಗಾತ್ತಾ ಸಹಾಯಕ ಆಯುಕ್ತರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು, ಎಲ್ಲಾ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಮೂರು ಕೃಷಿ ಕಾನೂನುಗಳನ್ನು ವಾಪಸ್ಸ ಪಡೆಯಬೇಕು.
ವಿದ್ಯುತ್ ಮಸೂದೆ ೨೦೨೦ನ್ನು ಹಿಂದಕ್ಕೆ ಪಡೆಯಬೇಕು. ಎಲ್ಲಾ ರೀತಿಯ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು. ಆದಾಯ ತೆರಿಗೆಯ ಮಿತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೂ ಮಾಸಿಕ ರೂ-೭೫೦೦/- ನಗದು ಹಣ ವರ್ಗಾವಣೆ ಮಾಡಬೇಕು. ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ೧೦ ಕೆ.ಜಿ. ಆಹಾರ ದಾನ್ಯಗಳನ್ನು ಉಚಿತವಾಗಿ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಾರ್ಷೀಕ ೨೦೦ ದಿನಗಳ ಕೆಲಸ ಮತ್ತು ದಿನಕ್ಕೆ ೭೦೦/- ರೂ ವೇತನ ನೀಡಬೇಕು, ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿಯನ್ನು ಪುನ: ಜಾರಿಗೆ ತರಬೇಕು ಎಂದು ಬೇಡಿಕೆಗಳನ್ನು ಇಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಸಿ.ಐಟಿಯು ಸಹಕಾರ್ಯದರ್ಶಿ ಮಹ್ಮದ್ ಹನೀಫ್, ತಾಲೂಕ ಪ್ರಧಾನ ಕಾರ್ಯದರ್ಶಿ ನಾಗರತ್ನ, ಬಾಬಾಜಾನಿ, ಹುಸೇನ್ ಭಾಷಾ ಮುದಗಲ್, ನೀಲಮ್ಮ ರಾಂಪೂರು, ದಾವಲಭೀ, ರಹಿಮಾ ಬೇಗಂ, ಅರುಣ, ಬಸಮ್ಮ, ಮೇರಿ, ಲಕ್ಷ್ಮೀ ಸೇರಿದಂತೆ ಕಾರ್ಯಕರ್ತರು ಇದ್ದರು.