
ನವದೆಹಲಿ,ಏ.28- ತುಂಡುಬಟ್ಟೆ ತೊಟ್ಟುಕೊಂಡು ಬಂದ ಯುವತಿ, ಲವರ್‌ಗಳ ಕಿಸ್ಸಿಂಗ್, ಬ್ರಾ-ಮಿನಿ ಸ್ಕರ್ಟ್ ಹಾಕಿಕೊಂಡು ಬಂದ ಪ್ರಕರಣಗಳ ಬಳಿಕ ಮತ್ತೊಂದು ಆತಂಕಕಾರಿ ಘಟನೆ ಮೆಟ್ರೋ ರೈಲಿನಲ್ಲಿ ನಡೆದಿದೆ.
ನಗರದ ಪ್ರಧಾನ ಸಾರಿಗೆಯಾಗಿರುವ ಮೆಟ್ರೋದಲ್ಲಿ ಯುವಕನೋರ್ವ ಹಸ್ತಮೈಥುನ ಮಾಡಿಕೊಂಡಿದ್ದು ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ, ಆತನ ಅಕ್ಕಪಕ್ಕದ ಪ್ರಯಾಣಿಕರು ತಲೆತಗ್ಗಿಸಿಕೊಂಡು ಆತನಿದ್ದ ಸ್ಥಳದಿಂದ ದೂರ ಹೋಗುತ್ತಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲಿಯೇ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕಿಡಿಕಿಡಿಯಾಗಿದ್ದು, ಡಿಸಿಪಿ ಹಾಗೂ ದೆಹಲಿ ಮೆಟ್ರೋದ ಅಧಿಕಾರಿಗಳಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತಾಗಿ ಟ್ವಿಟರ್‌ನಲ್ಲಿ ಬರೆದುಕೊಂಡರುವ ಸ್ವಾತಿ ಮಲಿವಾಲ್, ನಾಚಿಕೆಗೇಡಿನ ಪ್ರಕರಣದ ಕುರಿತಾಗಿ ದೆಹಲಿ ಪೊಲೀಸ್ ಹಾಗೂ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ನಾಚಿಕೆಯಿಲ್ಲದೆ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಇದು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅನಾರೋಗ್ಯಕರವಾಗಿದೆ. ಈ ನಾಚಿಕೆಗೇಡಿನ ಕೃತ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ನಾನು ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ನೋಟಿಸ್ ನೀಡುತ್ತಿದ್ದೇನೆ’ ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಯುವಕನೊಬ್ಬ (ಮೊಬೈಲ್ ಫೋನ್‌ನಲ್ಲಿ ಏನನ್ನೋ ನೋಡುತ್ತಿದ್ದಾರೆ) ದೆಹಲಿ ಮೆಟ್ರೋದಲ್ಲಿ ಉದ್ದೇಶಪೂರ್ವಕವಾಗಿ ಹಸ್ತಮೈಥುನ ಮಾಡುತ್ತಿರುವುದನ್ನು ತೋರಿಸಿದೆ ಮತ್ತು ಅವನ ಸುತ್ತಲಿನ ಇತರ ಪ್ರಯಾಣಿಕರು ಆತನಿಂದ ದೂರ ಹೋಗುತ್ತಿರುವ ದೃಶ್ಯಗಳು ಕೂಡ ದಾಖಲಾಗಿದೆ. ಈ ಘಟನೆಯನ್ನು ಮತ್ತೊಬ್ಬ ಪ್ರಯಾಣಿಕರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ, ಆದರೆ ಅವರು ಆತನ ಈ ಕೃತ್ಯವನ್ನು ತಡೆಯಲು ಅಥವಾ ಎಚ್ಚರಿಸುವ ಪ್ರಯತ್ನ ಮಾಡಿಲ್ಲ.
ಇನ್ನು ದೆಹಲಿ ಮೆಟ್ರೋದಲ್ಲಿ ಇಂಥ ಘಟನೆಗಳು ಆಗುತ್ತಿರುವುದು ಇದು ಮೊದಲೇನಲ್ಲ. ತೀರಾ ಇತ್ತೀಚೆಗೆ ಮಹಿಳೆಯೊಬ್ಬಳು ಬ್ರಾ ಹಾಗೂ ಮಿನಿಸ್ಕರ್ಟ್ ಧರಿಸಿ ರೈಲಿನಲ್ಲಿ ಪ್ರಯಾಣ ಮಾಡಿದ್ದಳು ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲು ಡಿಎಂಆರ್‌ಸಿ ಪ್ರಯಾಣಿಕರನ್ನು ಒತ್ತಾಯಿಸಿದೆ. ಆದರೆ ವೀಡಿಯೊದಲ್ಲಿರುವ ಮಹಿಳೆ ರೈಲಿನಲ್ಲಿ ವೀಡಿಯೊಗ್ರಫಿ ವಿರುದ್ಧದ ನೀತಿಯು ವೀಡಿಯೊವನ್ನು ಚಿತ್ರೀಕರಿಸಿದವರಿಗೂ ಅನ್ವಯಿಸಬೇಕು ಎಂದು ವಾದ ಮಾಡಿದ್ದಾಳೆ. ದೆಹಲಿ ಮಹಿಳಾ ಆಯೋಗವು ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ಸೂಚನೆ ನೀಡಿತ್ತು.