ದೆಹಲಿ ಮದ್ಯ ನೀತಿ: ಪೂರಕ ಆರೋಪ ಪಟ್ಟಿ: ರಾಜ್ಯಸಭಾ ಸದಸ್ಯ ರಾಘವ್ ಚಡ್ಡ ಹೆಸರು ನಮೂದು

ನವದೆಹಲಿ,ಮೇ.2- ದೆಹಲಿ ಮದ್ಯ ನೀತಿ ಪ್ರಕರಣದ ಪೂರಕ ಚಾರ್ಜ್‌ಶೀಟ್‌ನಲ್ಲಿ ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಜಾರಿ ನಿರ್ದೇಶನಾಲಯ ಹೊಸದಾಗಿ ಹೆಸರಿಸಿದೆ.

ಜಾರಿ ನಿರ್ದೇಶನಾಲಯದ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಹೆಸರು ಸೇರಿಸಿ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಕ್ಕೆ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ.

.ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರ ನಿವಾಸದಲ್ಲಿ, ಮದ್ಯ ನೀತಿ ರೂಪಿಸುವ ಸಮಯದಲ್ಲಿ ರಾಘವ್ ಚಡ್ಡಾ, ಪಂಜಾಬ್ ಸರ್ಕಾರದ ಎಸಿಎಸ್ ಹಣಕಾಸು, ಅಬಕಾರಿ ಆಯುಕ್ತರು, ವರುಣ್ ರೂಜಮ್, ಎಫ್‌ಸಿಟಿ ಮತ್ತು ಪಂಜಾಬ್ ಅಬಕಾರಿ ಅಧಿಕಾರಿಗಳ ಸಭೆ ಇತ್ತು, ಅಲ್ಲಿ ವಿಜಯ್ ನಾಯರ್ ಸಹ ಉಪಸ್ಥಿತರಿದ್ದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. .

ಈಗಾಗಲೇ ಮನೀಶ್ ಸಿಸೋಡಿಯ ಅವರನ್ನು ಬಂಧಿಸಲಾಗಿದ್ದು ಸದ್ಯ ಜೈಲಿನಲ್ಲಿ ಇದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ.

ಎ ಎಪಿ ಮುಖಂಡರು ಅಲ್ಲದೆ ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಹಲವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ವಿಚಾರಣೆಗೆ ಗುರಿಪಡಿಸಿದೆ

ಹೊಸದಾಗಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡ ಅವರ ಹೆಸರನ್ನು ಪೂರಕ ಆರೋಪ ಪಟ್ಟಿಯಲ್ಲಿ ಹೆಸರು ಉಲ್ಲೇಖಿಸಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯಸಭಾ ಸದಸ್ಯ ರಾಘವ ಚಡ್ಡ ಅವರು ಕೂಡ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ