ದೆಹಲಿ ದೊರೆಗಳಿಗೆ ಅತೃಪ್ತರ ದೂರು

ಬೆಂಗಳೂರು, ಜ.೧೪- ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಶಾಸಕರು ದೆಹಲಿ ದೊರೆಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜೇಯೇಂದ್ರನ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಅತೃಪ್ತಿ, ಅಸಮಾಧಾನ ಸ್ಫೋಟಗೊಂಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಸಚಿವಾಕಾಂಕ್ಷಿ ಶಾಸಕರು ಸಚಿವ ಸ್ಥಾನ ತಪ್ಪುತ್ತಿದ್ದಂತೆಯೇ ಯಡಿಯೂರಪ್ಪ ಅವರ ವಿರುದ್ಧ ಸಿಡಿದೆದ್ದು ಟೀಕೆಗಳ ಸುರಿಮಳೆ ಗರಿದಿರುವವರ ವಿರುದ್ಧ ಬಿಎಸ್‌ವೈ ಗುಡಿಗೆ ಅತೃಪ್ತ್ತರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಿಮ್ಮಗಳ ದೂರು ದುಃಖ ದುಮ್ಮಾನ ಏನೇ ಇದ್ದರೂ ದೆಹಲಿ ವರಿಷ್ಠರ ಬಳಿ ಹೇಳಿಕೊಳ್ಳಿ. ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತೆ ಬಹಿರಂಗವಾಗಿ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಅತೃಪ್ತರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ದೆಹಲಿಗೆ ತೆರಳಿ ವರಿಷ್ಥರಿಗೆ ದೂರು ನೀಡಲು ಮುಂದಾಗಿದ್ದಾರೆ. ಹಲವಾರು ಶಾಸಕರು ರೇಣುಕಾಚಾರ್ಯ ಅವರ ದಾರಿಯನ್ನೇ ಅನುಸರಿಸಲು ಸಿದ್ಧತೆ ನಡೆಸಿದ್ದಾರೆ.
ಮೊದಲಿನಿಂದಲೂ ಬಿಎಸ್‌ವೈ ಹಾಗೂ ಅವರ ಪುತ್ರ ವಿಜೇಯೇಂದ್ರ ವಿರುದ್ಧ ಕೆಂಡಕಾರುವ ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ತಂದೆ- ಮಗನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇವರಿಬ್ಬರಿಂದ ಬಿಜೆಪಿಗೆ ಹಾನಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಸಿಡಿ ಗುಮ್ಮ ಮತ್ತೆ ಮುನ್ನಲೆಗೆ ಬಂದಿದ್ದು ಸಿಡಿ ಹಿಡಿದು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲಾಗಿದೆ ಎಂಬ ಟೀಕೆಗಳು ಪಕ್ಷದ ವಲಯದಲ್ಲಿ ಕೇಳಿಬಂದಿದೆ.
ಸಿಡಿ ರಹಸ್ಯ ಮಾತ್ರ ನಿಗೂಢವಾಗಿದೆ.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗದ ಬಗ್ಗೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯರ ವರಿಷ್ಠರನ್ನು ಅವರನ್ನು ಭೇಟಿ ಮಾಡಲು ಇಂದು ಬೆಳಿಗ್ಗೆ ದೆಹಲಿಗೆ ತೆರಳಿದರು
ಹಲವು ಶಾಸಕರು ಶಾಸಕರು ಮುಂದಿನ ದಿನಗಳಲ್ಲಿ ದೆಹಲಿಗೆ ತೆರಳಿ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ
ಸಂಪುಟ ವಿಸ್ತರಣೆ ಪಕ್ಷದಲ್ಲಿನ ಚುನಾವಣೆಯಲ್ಲಿ ಸೋತ ಸಿಪಿ ಯೋಗೇಶ್ವರ್ ಅವರನ್ನ ಮಂತ್ರಿ ಮಾಡಿರುವುದಕ್ಕೆ ಕೆಂಡಮಂಡಲ ಆಗಿರುವ ರೇಣುಕಾಚಾರ್ಯರು ಸಿಪಿ ಯೋಗೇಶ್ವರ್ ಅವರ ಮೆಗಾಸಿಟಿ ಯೋಜನೆಯ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಸಿಡಿಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದು ಅದನ್ನು ವರಿಷ್ಠರಿಗೆ ನೀಡುವರು.
ಆಕ್ರೋಶ
ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು ಸಿಪಿ ಯೋಗೇಶ್ವರ್ ಮಂತ್ರಿ ಸ್ಥಾನ ನೀಡಿರುವುದು ಸರಿಯಲ್ಲ ಚುನಾವಣೆಯಲ್ಲಿ ಸೋತಿದ್ದರು,ನಂತರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ರಾಮನಗರ ಉಪಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು ಇಂಥವರನ್ನು ಮಂತ್ರಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು ಸಿಪಿ ಯೋಗೇಶ್ವರ್ ಗೆ ಸಂಬಂಧಿಸಿದಂತೆ ವರಿಷ್ಠರಿಗೆ ದೂರು ನೀಡಲು ದೆಹಲಿಗೆ ತೆರಳುತ್ತಿದ್ದೇನೆ ಸಂಪುಟ ವಿಸ್ತರಣೆಯಲ್ಲಿ ತಮಗೆ ಆಗಿರುವ ಅನ್ಯಾಯವನ್ನು ವರಿಷ್ಠರ ಗಮನಕ್ಕೆ ತರುತ್ತೇನೆಂದು ಅವರು ಹೇಳಿದರು ನಾಯಕತ್ವದ ವಿರುದ್ಧ ತಾವಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಯಡಿಯೂರಪ್ಪ ನಮ್ಮ ನಾಯಕರು ಆದರೆ ಪಕ್ಷ ನಿಷ್ಠರನ್ನು ಕಡೆಗಣಿಸಿ ಕೆಲವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅಸಮಾಧಾನವಿದೆ ಎಂದರು
ಯಾರೋ ಒಬ್ಬರಿಂದ ಮಾತ್ರ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ ಅಧಿಕಾರಕ್ಕೆ ಬರಲು ಎಲ್ಲಾ ಶಾಸಕರ ಕೊಡುಗೆಯೂ ಇದೆ ಎಂದು ಯೋಗೇಶ್ವರ್ ಅವರನ್ನ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
ತಲೆನೋವು
ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪಾಲಿಗೆ ಈಗ ಬಿಸಿತುಪ್ಪವಾಗಿದೆ ಸಚಿವ ಸ್ಥಾನ ಸಿಗದ ಶಾಸಕರ ಆಕ್ರೋಶ ಯಾವ ಮುಂದೆ ಯಾವ ಸ್ವರೂಪ ತಾಳುತ್ತದೆ ಹೇಳಲುಬಾರದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಕಷ್ಟದ ದಿನಗಳು ಆರಂಭವಾಗಿದೆ ಹಿಂದಿರುವ ತಪ್ಪೇನಲ್ಲ.
ಈಗಿನ ಅಸಮಧಾನ ಅತೃಪ್ತಿಗಳನ್ನು ಅವರು ಯಾವ ರೀತಿ ನಿಭಾಯಿಸುತ್ತಾರೆ ಕಾದುನೋಡಬೇಕಿದೆ ಏನೇ ಆದರೂ ಸಂಪುಟ ವಿಸ್ತರಣೆ ಸೆರಗಿಗೆ ಕಟ್ಟಿಕೊಂಡ ನಿಗಿನಿಗಿ ಕೆಂಡ .ಈ ಕೆಂಡ ಯಾವಾಗ ಜ್ವಾಲೆಯ ರೂಪ ತಾಳುತ್ತದೊ ಗೊತ್ತಿಲ್ಲ.
ಸಮಯ ಸಿಕ್ಕಾಗಲೆಲ್ಲಾ ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿರುವಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಂಭಾಳಿಸುವುದು ಯಡಿಯೂರಪ್ಪನವರಿಗೆ ಸುಲಭವಲ್ಲ ಮುಂದೆ ಯತ್ನಾಳ್ ಅವರ ಜೊತೆಗೆ ಹಲವು ಶಾಸಕರು ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಹಾಗಾಗಿ ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ.

ಣ೧೪b೨೫-s

ಮುಂದಿನವಾರ ಅತೃಪ್ತರ ಸಭೆ
ಸಚಿವ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಶಾಸಕರುಗಳೆಲ್ಲಾ ಮುಂದಿನ ವಾರ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಸಂಪುಟ ವಿಸ್ತರಣೆ ಬೆನ್ನಲ್ಲೆ ಸಚಿವ ಯೋಗೇಶ್ವರ್ ವಿರುದ್ದ ವರಿಷ್ಠರಿಗೆ ದೂರು ನೀಡಲು ದೆಹಲಿಗೆ ಆಗಮಿಸಿರುವ ರೇಣುಕಾಚಾರ್ಯ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ಅತೃಪ್ತ, ಅಸಮಾಧಾನಿತ ಶಾಸಕರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಮುಂದಿನ ವಾರ ಈ ಅಸಮಾಧಾನಿತರ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.
ಸಚಿವ ಸ್ಥಾನ ವಂಚಿತ ಶಾಸಕರುಗಳ ಈ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ನನಗೆ ಸಚಿವ ಸ್ಥಾನ ನೀಡಿ ಎಂದು ನಾನು ಕೇಳಿರಲಿಲ್ಲ. ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಕೋರಿದ್ದೆ. ೧೨ ಜಿಲ್ಲೆಗಳಿಗೆ ಪ್ರಾತಿನಿಧ್ಯವೆ ಇಲ್ಲ ಎಂದರು.
ಸಚಿವ ಸಂಪುಟ ಬೆಳಗಾವಿ ಮತ್ತು ಬೆಂಗಳೂರಿನ ಸಚಿವ ಸಂಪುಟವಾಗಿದೆ. ಎಲ್ಲವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದರು.