ದೆಹಲಿ- ಡೆಹರಾಡೂನ್ ಮಧ್ಯೆ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆ ಮೋದಿ ಚಾಲನೆ

ನವದೆಹಲಿ,ಡಿ.೪- ರಾಷ್ಟ್ರರಾಜಧಾನಿ ದೆಹಲಿ ಮತ್ತು ಉತ್ತರಕಾಂಡದ ರಾಜಧಾನಿ ಡೆಹರಾಡೂನ್ ನಡುವೆ ೮,೩೦೦ ಕೋಟಿ ರೂಪಾಯಿ ಮೊತ್ತದ ಎಕ್ಸ್ ಪ್ರೆಸ್ ಕಾರಿಡಾರ್ ಸೇರಿದಂತೆ ಸರಿ ಸುಮಾರು ೧೮ ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.
ದೆಹಲಿ ಮತ್ತು ರಾಡು ನಡುವೆ ಎಕ್ಸ್ ಪ್ರೆಸ್ ಕಾರಿಡಾರ್ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಆರೂವರೆಗಂಟೆಗೆ ಪ್ರಯಾಣದ ಸಮಯ ಕೇವಲ ಎರಡೂವರೆ ಗಂಟೆಗೆ ತಿಳಿಯಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ .
ಉತ್ತರಕಾಂಡದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಇದಕ್ಕಾಗಿ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೂಡಿಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
ಸರಿ ಸುಮಾರು ೧೮ ಸಾವಿರ ಕೋಟಿ ಮೊತ್ತದ ೧೧ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಉತ್ತರಪ್ರದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ.
ಅದರಲ್ಲಿಯೂ ಎಕ್ಸ್ಪ್ರೆಸ್ ಕಾರಿಡಾರ್ ನಿರ್ಮಾಣದಿಂದಾಗಿ ದೆಹಲಿ ಡೆಹರಾಡೂನ್, ಹರಿದ್ವಾರ ಮುಜಾಫರ್ನಗರ, ಶಾಮಿಲಿ, ಯಮುನಾ ನಗರ, ಭಾಗ್ ಪತ್, ಮೀರತ್ ಬರುತ್ ಸೇರಿದಂತೆ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.
ಜೊತೆಗೆ ಈ ನಗರಗಳ ನಡುವೆ ಮೆಟ್ರೋ ಸಂಪರ್ಕ ಕಲ್ಪಿಸಲು ಇರುವ ಹಿನ್ನೆಲೆಯಲ್ಲಿ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಜನರು ಸಂಚಾರ ದಟ್ಟಣೆಯಲ್ಲಿ ಗಂಟೆಗಳ ಕಾಲ ನಿಲ್ಲುವುದು ತಪ್ಪಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ನೆನ್ನೆ ಆಗಮಿಸಿ ಪೂರ್ವಸಿದ್ಧತೆಗಳನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜ್ಯೋತಿ ಪರಿಶೀಲನೆ ನಡೆಸಿದ್ದರು.