
ನವದೆಹಲಿ,ಮಾ.೮- ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಾಣುವ ಮೂಲಕ ರಾಷ್ಡ್ರ ರಾಜಧಾನಿ ದೆಹಲಿಯಲ್ಲಿ ತುಸು ಸುಧಾರಣೆ ಕಂಡರೆ ದೇಶದ ವಿವಿಧ ಮಹಾನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದು ಆತಂಕ್ಕೆ ಎಡೆ ಮಾಡಿದೆ.
೨೦೨೨-೨೩ ರ ಚಳಿಗಾಲದಲ್ಲಿ ಕೋಲ್ಕತ್ತಾ ಮತ್ತು ಮುಂಬೈ ,ದೆಹಲಿಯ ನಂತರ ಹೆಚ್ಚು ಕಲುಷಿತಗೊಂಡಿವೆ, ಬೆಂಗಳೂರು ಮತ್ತು ಚೆನ್ನೈ ಅಪಾಯಕಾರಿ ಮಾಲಿನ್ಯಕಾರಕ ಮಟ್ಟ ತಲುಪಿವೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಹೇಳಿದೆ.
ಅಕ್ಟೋಬರ್-ಫೆಬ್ರವರಿ ಅವಧಿಯಲ್ಲಿ ದೇಶದಲ್ಲಿ ಬಿಡುಗಡೆಯಾದ ಸಿಎಸ್ ಇ ವರದಿ ಅನ್ವಯ, ಎಲ್ಲಾ ಮಹಾನಗರಗಳಲ್ಲಿ ವಿವಿಧ ಭೂ-ಹವಾಮಾನ ವಲಯಗಳಲ್ಲಿ ಸ್ಥಳಗಳನ್ನು ವಾಯು ಮಾಲಿನ್ಯ ಸಂಪೂರ್ಣ ಹದಗೆಟ್ಟಿದೆ ಎಂದು ತಿಳಿಸಲಾಗಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಅತ್ಯಧಿಕವಾಗಿದ್ದರೆ, ಉಳಿದ ನಗರಗಳಲ್ಲಿ ಕಳಪೆಯಿಂದ ಕೂಡಿವೆ.ದೆಹಲಿಯನ್ನು ಹೊರತುಪಡಿಸಿದರೆ, ಕೋಲ್ಕತ್ತಾ ಅತಿ ಹೆಚ್ಚು “ಅತ್ಯಂತ ಕಳಪೆ” ದಿನಗಳನ್ನು ಹೊಂದಿದ್ದರೆ, ಮುಂಬೈ ೨೦೨೨-೨೩ರ ಚಳಿಗಾಲದಲ್ಲಿ ಕಡಿಮೆ ಸಂಖ್ಯೆಯ ’ಉತ್ತಮ’ ದಿನಗಳನ್ನು ಹೊಂದಿದೆ.
ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಚಳಿಗಾಲದ ಗರಿಷ್ಠ ಮಾಲಿನ್ಯ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕೆಟ್ಟದಾಗಿದೆ.”ಇತರ ಬೃಹತ್ ನಗರಗಳಲ್ಲಿ ಹೆಚ್ಚುತ್ತಿರುವ ಚಳಿಗಾಲದ ವಾಯುಮಾಲಿನ್ಯ ಸಾಕಷ್ಟು ಪರಿಣಾಮ ಬೀರಿದೆ ಎಂದು ವರದಿಯಲ್ಲಿ ತಿಳಿಸಿದೆ.
ಚಳಿಗಾಲದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿದ್ದು ಅನುಕೂಲಕರವಾದ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರಬಹುದು, ಆದರೆ ಅವುಗಳ ಒಟ್ಟಾರೆ ನಗರ ಸರಾಸರಿ ಮತ್ತು ಸ್ಥಳಗಳಲ್ಲಿನ ಮಟ್ಟಗಳು ಹೆಚ್ಚಿನ ಮಾನ್ಯತೆಗಳನ್ನು ಉಂಟುಮಾಡಬಹುದು,” ಎಂದು ಸಿಎಸ್‌ಇಯ ಕಾರ್ಯನಿರ್ವಾಹಕ ನಿರ್ದೇಶಕ ಅನುಮಿತಾ ರಾಯ್ ಚೌಧರಿ ಹೇಳಿದ್ದಾರೆ.
ಚಳಿಗಾಲದ ಅವಧಿಯಲ್ಲಿ ಅಕ್ಟೋಬರ್ ೧-ಫೆಬ್ರವರಿ ೨೮ರವೆಗೆ ದೆಹಲಿ, ಕೋಲ್ಕತ್ತಾ-ಹೌರಾ, ಮುಂಬೈ, ಹೈದರಾಬಾದ್, ಬಂಗಾಳ ಮತ್ತು ಚೆನ್ನೈಗಳಲ್ಲಿನ ಡೇಟಾದ ವಿಶ್ಲೇಷಣೆಯು ಹಿಂದಿನದಕ್ಕೆ ಹೋಲಿಸಿದರೆ ಐದು ಮಹಾನಗರದಲ್ಲಿ ಈ ಚಳಿಗಾಲದಲ್ಲಿ ಮಾಹಿಯಿ ಸಂಗ್ರಹಿಸಿ ಈ ಮಾಹಿತಿ ಹೊರಹಾಕಲಾಗಿದೆ.