ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಸುರಪುರದ ದುಂದುಮೆ ಕಲಾ ತಂಡ ಭಾಗಿ: ಅಂಗಡಿ

ಶಹಾಪೂರ:ಫೆ.22:ದೆಹಲಿ ಕರ್ನಾಟಕ ಸಂಘದ 75ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ಯ ಆಯೋಜಿಸಿರುವ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ 7 ಜಿಲ್ಲೆಯ 20 ಕಲಾ ತಂಡಗಳೊಂದಿಗೆ ಒಟ್ಟು 200 ಜನ ಕಲಾವಿಧರು ಭಾಗವಹಿಸುತ್ತಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದುಂದುಮೆ ಕಲಾ ತಂಡದ ಲಕ್ಷ್ಮಣ ಗುತ್ತೆದಾರ ಮತ್ತು ಸಂಗಡಿಗರು ಪಾಲ್ಗೊಳ್ಳುತ್ತಿದ್ದಾರೆ ಎಂದು ಒಕ್ಕೂಟದ ಪ್ರದಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೆಹಲಿಯ ತಾಲ್ಕೊಟೋರ್ ಕ್ರೀಡಾಂಗಣದಲ್ಲಿ ಫೆಬ್ರವರಿ-25 ಮತ್ತು 26 ರಂದು ನಡೆಯಲಿರುವ ಸಮಾರಂಭವನ್ನು ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ಕರ್ನಾಟಕ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಲವುಜನ ಸಚಿವರು ಹಾಗೂ ವಿವಿಧ ಪೂಜ್ಯನಿಯ ಮಠಾಧಿಶರು, ರಾಜಕಿಯ ಮುಖಂಡರು ಪಾಲ್ಗೊಳ್ಳಲಿದ್ದು, ಸದರಿ ಸಮಾರಂಭದಲ್ಲಿ ಯಾದಗಿರಿ ಜಿಲ್ಲೆಯ ಕಲಾ ತಂಡಕ್ಕೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ ಹಾಗೂ ಕಾರ್ಯಾದರ್ಶಿ ಆರ್. ರೇಣು ಕುಮಾರ ಹಾಗೂ ಪದಾಧಿಕಾರಿಗಳ ಆವ್ಹಾನದ ಮೇರೆಗೆ ದೆಹಲಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಕಲ್ಯಾಣ ಕರ್ನಾಟಕದ ಕಲಾವಿಧರು ಮೊದಲನೆಬಾರಿಗೆ ರಾಷ್ಟ್ರದ ರಾಜಧಾನಿಯಲ್ಲಿ ಕಲಾ ಪ್ರದರ್ಶನ ನಡೆಸುತ್ತಿರುವುದು ನಮ್ಮ ಒಕ್ಕುಟಕ್ಕೆ ಹೆಚ್ಚು ಸಂತಸ ತಂದಿದೆ ಪ್ರಕಾಶ ಅಂಗಡಿ ಕನ್ನೆಳ್ಳಿ ಹರ್ಷ ವ್ಯಕ್ತ ಪಡಿಸಿದ್ದಾರೆ.