
ನವದೆಹಲಿ, ಮಾ.೧-ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಉತ್ತರಾಖಂಡದಲ್ಲಿ ಇಂದಿನಿಂದ ೨-೩ ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಬೆಳಗ್ಗೆಯಿಂದಲೇ ದೆಹಲಿಯಲ್ಲಿ ತಾಪಮಾನದಲ್ಲಿ ಭಾರಿ ಕುಸಿತ ಕಂಡಿದೆ. ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ ಮತ್ತು ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಬುಧವಾರ ಗುಡುಗು ಸಹಿತ ಲಘುವಾಗಿ ಮಧ್ಯಮ ತೀವ್ರತೆಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ವಾಯುವ್ಯ ದೆಹಲಿ, ನೈಋತ್ಯ ದೆಹಲಿ (ಮುಂಡಕಾ, ಜಾಫರ್‌ಪುರ್, ನಜಾಫ್‌ಗಢ), ಎನ್‌ಸಿಆರ್ (ಬಹದ್ದೂರ್‌ಗಢ) ಚಾರ್ಕಿ ದಾದ್ರಿ, ಮಟ್ಟನ್‌ಹೇಲ್, ಜಜ್ಜರ್ (ಹರಿಯಾಣ) ಮತ್ತು ಪ್ರತ್ಯೇಕ ಸ್ಥಳಗಳ ಪಕ್ಕದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.
ದೆಹಲಿ, ಗಾಜಿಯಾಬಾದ್, ಇಂದಿರಾಪುರಂ) ಕರ್ನಾಲ್, ಮೆಹಮ್, ರೋಹ್ಟಕ್, ಭಿವಾನಿ (ಹರಿಯಾಣ) ಹಸ್ತಿನಾಪುರ, ಚಂದ್‌ಪುರ, ಅಮ್ರೋಹಾ (ಯುಪಿ) ನ ಕೆಲವು ಸ್ಥಳಗಳ ಪಕ್ಕದ ಪ್ರದೇಶಗಳು ಮುಂದಿನ ೨ ಗಂಟೆಗಳಲ್ಲಿ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಷ್ಟ್ರ ರಾಜಧಾನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ತಾಪಮಾನ ಕೊಂಚ ತಗ್ಗಿತ್ತು.
ಫೆಬ್ರವರಿಯಲ್ಲಿ ಸರಾಸರಿ ಗರಿಷ್ಠ ತಾಪಮಾನವು ೨೭.೭ ಡಿಗ್ರಿಗಳಾಗಿದ್ದು, ೧೭ ವರ್ಷಗಳಲ್ಲಿ ತಿಂಗಳಿಗೆ ಅತ್ಯಧಿಕವಾಗಿದೆ. ಹವಾಮಾನ ತಜ್ಞರು ಮಳೆಯ ಕೊರತೆಯಿಂದಾಗಿ ಈ ಅಸಾಮಾನ್ಯ ತಾಪಮಾನಕ್ಕೆ ಕಾರಣವಾಗಿದೆ.