ದೆಹಲಿಯಲ್ಲಿ ರಣವೀರ್ ಆಲಿಯಾ ಸಂಚಾರ

ನವದೆಹಲಿ,ಜು.೧೮-ಬಾಲಿವುಡ್‌ನ ಕ್ಯೂಟ್ ಜೋಡಿಯಾದ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ ಈಗ ಒಟ್ಟಿಗೆ ಈ ಜೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆ, ರಣವೀರ್ ಹಾಗೂ ಆಲಿಯಾ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ.
ಸದ್ಯ ಸಿನಿಮಾ ಪ್ರಚಾರದಲ್ಲಿ ತೊಡಗಿರುವ ನಟಿ ಆಲಿಯಾ ಹಾಗೂ ರಣವೀರ್ ದೆಹಲಿಯ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಇಬ್ಬರು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ದೆಹಲಿ ವಿಮಾನ ನಿಲ್ದಾಣದಿಂದ ಪ್ರಚಾರಕ್ಕೆ ಹೊರಟಿದ್ದಾರೆ. ಈ ಫೋಟೋ ವಿಡಿಯೋಗಳನ್ನು ಪಾಪರಾಜಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ನಡುವೆಯೇ ಈ ಕ್ಯೂಟ್ ಕಪಲ್ ನಟಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಮೂರನೇ ಕಮಲೇಯ ಹಾಡು ಇಂದು ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಟ್ರೇಲರ್‌ಗೆ ಈಗಾಗಲೇ ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದು, ತೆರೆ ಮೇಲೆ ರಿಯಲ್ ಜೋಡಿಗಳ ರೊಮ್ಯಾನ್ಸ್ ನೋಡಲು ಕಾತುರರಾಗಿದ್ದಾರೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಿರ್ದೇಶಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಆಲಿಯಾ ರಣವೀರ್ ಸಿಂಗ್ ಜೊತೆಗೆ ಶಬಾನಾ, ಧರ್ಮೆಂದ್ರ ಮತ್ತು ಜಯಾ ಬಚ್ಚನ್ ಕೂಡ ನಟಿಸಿದ್ದಾರೆ. ಇದೇ ತಿಂಗಳ ೨೮ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.