ದೆಹಲಿಯಲ್ಲಿ ಮದ್ಯಕ್ಕೆ ಬರ!

ನವದೆಹಲಿ, ಜು.೩೦- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಾರಿ ಮಾಡಿರುವ ಹೊಸ ಅಬಕಾರಿ ನೀತಿಯಿಂದ ಸೋಮವಾರದಿಂದ ಮದ್ಯದ ಕೊರತೆ ಉಂಟಾಗುವ ಸಾಧ್ಯತೆ ಇದೆ.
ಇದು ಸಹಜವಾಗಿ ಕುಡುಕರಿಗೆ ಮದ್ಯ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗುವ ಲಕ್ಷಣ ಗೊಚರಿಸಿದೆ.
ದೆಹಲಿ ಸರ್ಕಾರದ ನಿರ್ಧಾರದಿಂದ ಸೋಮವಾರದಿಂದ ೪೬೮ ಖಾಸಗಿ ಮದ್ಯದ ಅಂಗಡಿಗಳು ಮುಚ್ಚಲಿದ್ದು ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಲಭ್ಯತೆಯಲ್ಲಿ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಯಾಗಲಿದೆ.
ಕೊರತೆ ಎದುರಾಗದಂತೆ ಕ್ರಮ:
ಆಗಸ್ಟ್ ೧ ರಿಂದ ಹೊಸ ಅಬಕಾರಿ ನೀತಿ ಜಾರಿಯಾಗುವವರೆಗೆ ಸರ್ಕಾರಿ ಸಾಮ್ಯಸಲ್ಲಿ ನಡೆಸುವ ಮದ್ಯದ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಹೊಸ ಅಬಕಾರಿ ನೀತಿ ಹಿಂಪಡೆದಿದ್ದೇವೆ ಮತ್ತು ಸರ್ಕಾರಿ ಮದ್ಯದಂಗಡಿಗಳನ್ನು ತೆರೆಯಲು ನಿರ್ದೇಶನ ನೀಡಿದ್ದೇವೆ. ಮದ್ಯದ ಅಬಾವ ಎದುರಾಗದಂತೆ ನೋಡಿಕೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಹೇಳಿದ್ದಾರೆ.
ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿ ವಿಫಲವಾಗುವಂತೆ ಮಾಡಲು ಕೇಂದ್ರ ಸರ್ಕಾರ ಇಡಿ ಮತ್ತು ಸಿಬಿಐ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿರುವ ಅವರು ದೆಹಲಿಯಲ್ಲಿ ಮದ್ಯ ಕಡಿಮೆ ಮಾಡಲು ಮತ್ತು ಕೊರತೆ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಗುಜರಾತ್‌ನಂತೆ ದೆಹಲಿಯ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ನಕಲಿ, ಕರ್ತವ್ಯರಹಿತ ಮದ್ಯದ ಮಾರಾಟವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ಆರೋಪಿಸಿದ್ದಾರೆ.