ದೆಹಲಿಯಲ್ಲಿ ಭಾರೀ ಮಳೆ

ನವದೆಹಲಿ, ಏ.೪- ರಾಷ್ಟ್ರ ರಾಜಧಾನಿ ನವದೆಹಲಿ ಯಲ್ಲಿ ಇಂದು ಮುಂಜಾನೆಯೇ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿದೆ.
ದೆಹಲಿಯ ಹಲವು ಪ್ರದೇಶಗಳು, ಗಾಜಿಯಾಬಾದ್ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿವೆ. ಮತ್ತೊಂದೆಡೆ, ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಮುಂದಿನ ೨ ಗಂಟೆ ಅವಧಿಯಲ್ಲಿ ಸಂಪೂರ್ಣ ದೆಹಲಿ ಮತ್ತು ಎನ್‌ಸಿಆರ್, ಗನ್ನೌರ್, ಮೆಹಮ್, ತೋಷಮ್, ರೋಹ್ಟಕ್, ಭಿವಾನಿ (ಹರಿಯಾಣ) ಬರೌತ್, ಶಿಕರ್‌ಪುರ್, ಖುರ್ಜಾ (ಯುಪಿ) ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಅಥವಾ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಅದೇ ರೀತಿ, ಕಿಥೋರ್, ಗರ್ಮುಕ್ತೇಶ್ವರ, ಪಿಲಾಖುವಾ, ಹಾಪುರ್, ಗುಲಾವೋಟಿ, ಸಿಯಾನಾ, ಸಿಕಂದರಾಬಾದ್, ಬುಲಂದ್‌ಶಹರ್, ಜಹಾಂಗೀರಾಬಾದ್, ಅನುಪ್‌ಶಹರ್, ಬಹಾಜೋಯ್, ಪಹಾಸು, ದೇಬಾಯಿ, ನರೋರಾ, ಗಭಾನಾ, ಸಹಸ್ವಾನ್, ಜತ್ತರಿ, ಅಟ್ರೌಲಿ, ಅಟ್ರೌಲಿ, ಅಟ್ರೌಲಿ, ನಂದಗಾಂವ್, ಇಗ್ಲಾಸ್, ಸಿಕಂದರಾ ರಾವ್, ಬರ್ಸಾನಾ, ರಾಯಾ, ಹತ್ರಾಸ್, ಮಥುರಾ (ಯು.ಪಿ) ದೀಗ್ (ರಾಜಸ್ಥಾನ)ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಟ್ರಾಫಿಕ್ ಸಲಹೆಗಳನ್ನು ಅನುಸರಿಸಿ. ಮನೆಯೊಳಗೆ ಇರಿ. ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ. ಮರಗಳ ಕೆಳಗೆ ಆಶ್ರಯ ಪಡೆಯಬೇಡಿ ಎಂದು ಭಾರತೀಯ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.