ದೆಹಲಿಯಲ್ಲಿ ಭಾರೀ ಚಳಿ ಜನ ತತ್ತರ


ನವದೆಹಲಿ, ನ ೨೨- ರಾಷ್ಟ್ರರಾಜಧಾನಿಯಲ್ಲಿ ದೆಹಲಿಯಲ್ಲಿ ತೀವ್ರ ಚಳಿಗೆ ಜನರು ತತ್ತರಿಸಿದ್ದಾರೆ. ಲಾ ನಿನೊ ದುರ್ಬಲವಾಗಿರುವ ಕಾರಣ ದೆಹಲಿಯಲ್ಲಿ ಈ ವರ್ಷ ಸಾಮನ್ಯಕ್ಕಿಂತ ಚಳಿ ಹೆಚ್ಚಾಗಿರುತ್ತದೆ ಎಂದು ಹವಾಮಾನ ಪ್ರಾದೇಶಿಕ ಇಲಾಖೆಯ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
ದೆಹಲಿಯಲ್ಲಿ ತೀವ್ರ ಚಳಿ ಕಂಡುಬಂದಿದೆ. ಕನಿಷ್ಠ ತಾಪಮಾನ ೮.೫ ಡಿಗ್ರಿ ಸೆಲ್ಸಿಯಸ್ ಇತ್ತೆಂದು ವರದಿಯಾಗಿದೆ. ದೆಹಲಿಯಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ಮಿತಿಗಿಂತ ನಾಲ್ಕು ಅಂಶ ಕಡಿಮೆ ಇದೆ ಎಂಬುದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದತ್ತಾಂಶದಿಂದ ತಿಳಿದುಬಂದಿದೆ. ಶುಕ್ರವಾರ ಕನಿಷ್ಠ ತಾಪಮಾನ ೭.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ೧೪ ವರ್ಷಗಳಲ್ಲಿ ನವಂಬರ್ ತಿಂಗಳಲ್ಲಿ ದೆಹಲಿಯಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಲಾ ನಿನೊ ಪರಿಸ್ಥಿತಿ ದುರ್ಬಲವಾಗುತ್ತಿದ್ದು, ಈ ವರ್ಷ ಅತಿಯಾದ ಚಳಿಗಾಲವಾಗಬಹುದೆಂದು ಅಂದಾಜಿಸಿದ್ದೇವೆ. ಎಲ್‌ನಿನೊ ಮತ್ತು ಲಾನಿನೊ ಪರಿಸ್ಥಿತಿಯ ವ್ಯತ್ಯಾಸದಿಂದ ಜಾಗತಿಕ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಾನಿನೊ ಪರಿಸ್ಥಿತಿಯು ಶೀತ ಹವಾಮಾನಕ್ಕೆ ಅನೂಕೂಲಕರವಾಗಿದೆ. ಅದೇ ಎಲ್‌ನಿನೊ ಪರಿಸ್ಥಿತಿ ಪ್ರತಿಕೂಲವಾಗಿದೆ’ ಎಂದು ಹವಾಮನಾ ಇಲಾಖೆ ಎಚ್ಚರಿಸಿದೆ.
ಲಾ ನಿನಾ ಸಮಯದಲ್ಲಿ, ಮಧ್ಯ ಪೆಸಿಫಿಕ್ ಮಹಾಸಾಗರದ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇಳಿಯುತ್ತದೆ, ಗಾಳಿಯ ಮಾದರಿಗಳನ್ನು ಪ್ರಚೋದಿಸುವುದು ದೂರದ ಪ್ರದೇಶಗಳಲ್ಲಿನ ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ. ಇದು ವಾಯುವ್ಯ ಭಾರತದಲ್ಲಿ ಸಾಮಾನ್ಯ ಚಳಿಗಾಲಕ್ಕಿಂತಲೂ ತಂಪಾಗಿರುತ್ತದೆ.
“ಈ ಋತುವಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ೨-೨.೫ ಲಿ ಸೆ ವರೆಗೆ ಉಳಿಯುವ ಸಾಧ್ಯತೆಯಿದೆ. ಅಲ್ಲದೆ, ಚಳಿಗಾಲವು ಈಗಾಗಲೇ ಕಡಿಮೆ ತಾಪಮಾನದೊಂದಿಗೆ ಪ್ರಾರಂಭವಾಗುವುದರಿಂದ, ಡಿಸೆಂಬರ್ ೧೦ ರ ಹೊತ್ತಿಗೆ ಕನಿಷ್ಠ ೫-೬ ಡಿ ಸೆಗೆ ಇಳಿಯುವ ಸಾಧ್ಯತೆಯಿದೆ. ಇದು ಸಾಮಾನ್ಯವಾಗಿ ಡಿಸೆಂಬರ್ ೨೦ ರ ನಂತರ ಸಂಭವಿಸುತ್ತದೆ ”ಎಂದು ಶ್ರೀವಾಸ್ತವ ಹೇಳಿದ್ದಾರೆ.
ದೆಹಲಿಯಲ್ಲಿ ಕಳೆದ ವರ್ಷ ಕನಿಷ್ಠ ತಾಪಮಾನ ೧೧.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ೨೦೧೮ ರಲ್ಲಿ ೧೦.೫ ಮತ್ತು ೨೦೧೭ರಲ್ಲಿ ೭.೬ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.೧೯೩೮ ನವೆಂಬರ್ ತಿಂಗಳಲ್ಲಿ ಅತಿ ಕನಿಷ್ಠ ತಾಪಮಾನ ೩.೯ ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.